ಸಾಂದರ್ಭಿಕ ಚಿತ್ರ 
ವಾಣಿಜ್ಯ

ಪಿಎನ್ ಬಿ ವಂಚನೆ ಪ್ರಕರಣ ಇಡಿ ತನಿಖೆಗೆ; ಎಲ್ಲಾ ಬ್ಯಾಂಕುಗಳಿಂದ ವಸ್ತುಸ್ಥಿತಿ ವರದಿ ಕೇಳಿದ ಸಚಿವಾಲಯ

ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ನಲ್ಲಿ ಸುಮಾರು 11,360 ಕೋಟಿ ರೂಪಾಯಿ ಅವ್ಯವಹಾರ ...

ನವದೆಹಲಿ: ದೇಶದಲ್ಲಿ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಪಟ್ಟ ಅಪರಾಧಗಳ ಕುರಿತು ತನಿಖೆ ನಡೆಸುವ ಸರ್ಕಾರದ ಸಂಸ್ಥೆ ಜಾರಿ ನಿರ್ದೇಶನಾಲಯ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ(ಪಿಎನ್ ಬಿ)  ಬೆಳಕಿಗೆ ಬಂದಿರುವ ಸುಮಾರು 11,360 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಸಾಧ್ಯತೆಯ ಪ್ರಕರಣವನ್ನು ತನಿಖೆ ನಡೆಸಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಂತರ 120 ಶತಕೋಟಿ ಡಾಲರ್ ಸಂಪತ್ತು ಹೊಂದುವ ಮೂಲಕ ದೇಶದಲ್ಲಿಯೇ ಎರಡನೆ ಅತಿದೊಡ್ಡ ವಹಿವಾಟಿನ ಬ್ಯಾಂಕು ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಗಿದ್ದು, ನಿಯಂತ್ರಕವನ್ನು ಹಣಕಾಸು ಸಚಿವಾಲಯಕ್ಕೆ ನಿನ್ನೆ ಸಲ್ಲಿಸಿದೆ. ಅದರಲ್ಲಿ ಕೆಲವು ಆಯ್ದ ಖಾತೆ ಬಳಕೆದಾರರಿಂದ ಈ ಭಾರೀ ವಂಚನೆ ನಡೆದಿದ್ದು ಇದರ ವಿಷಯವನ್ನು ಜಾರಿ ನಿರ್ದೇಶನಾಲಯ ಶಾಖೆಗಳಿಗೆ ವಹಿಸಲಾಗಿದೆ ಎಂದು ಹೇಳಿದೆ.
ಇದೊಂದು ಪ್ರತ್ಯೇಕ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ವಂಚನೆ ಪ್ರಕರಣವಾಗಿದ್ದು ಸಂಯುಕ್ತ ಸಂಸ್ಥೆಗಳು ಇದರ ತನಿಖೆ ನಡೆಸಲಿವೆ ಎಂದು ಹೆಸರು ಹೇಳಲಿಚ್ಛಿಸದ ಹಣಕಾಸು ಅಧಿಕಾರಿಯೊಬ್ಬರು ರಾಯ್ಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮುಂಬೈಯ ಪಿಎನ್ ಬಿಯ ಬ್ರಾಡಿ ಹೌಸ್ ಶಾಖೆಯ ವ್ಯವಸ್ಥಾಪಕ ಲೆಟರ್ಸ್ ಆಫ್ ಅಂಡರ್ ಟೇಕಿಂಗ್(ಎಲ್ ಒಯು)ನ್ನು ಹೊರಡಿಸಿದ್ದಾರೆ. ಎಲ್ ಒಯುವನ್ನು ಬೇರೆ ಬ್ಯಾಂಕುಗಳಿಂದ ಹಣವನ್ನು ಹೆಚ್ಚಿಸಲು ಮೇಲಾಧಾರವಾಗಿ ಬಳಸಲಾಗುತ್ತದೆ.ವಂಚನೆ ನಡೆದ ಹಣಕಾಸು ವಹಿವಾಟಿನ ಮೊತ್ತ ಅಂದಾಜು 1,771.69 ಡಾಲರ್ ಗಳಷ್ಟಾಗಿರಬಹುದು. ಪ್ರಕರಣವನ್ನು ಸಿಬಿಐಗೆ ಉಲ್ಲೇಖಿಸಲಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ.
ಮುಂಬೈ ಷೇರು ವಿನಿಮಯ ಮಾರುಕಟ್ಟೆ ಸಲ್ಲಿಕೆಯಲ್ಲಿ ಬ್ಯಾಂಕು ಯಾರ ಹೆಸರುಗಳನ್ನು ಉಲ್ಲೇಖಿಸದಿದ್ದರೂ ಕೂಡ ಇತರ 30 ಸಾರ್ವಜನಿಕ ವಲಯ ಬ್ಯಾಂಕುಗಳಿಗೆ ಮೊನ್ನೆ 12ರಂದು ಎಚ್ಚರಿಕೆಯ ನೊಟೀಸ್ ಕಳುಹಿಸಿ ಶತಕೋಟಿ ಸಂಪತ್ತಿನ ಒಡೆಯ ಜ್ಯುವೆಲ್ಲರಿ ವಿನ್ಯಾಸಗಾರ ನೀರವ್ ಮೋದಿ ಮತ್ತು ಗೀತಾಂಜಲಿ ಜೆಮ್ಸ್ ವಂಚನೆ ಪ್ರಕರಣಕ್ಕೆ ಕಾರಣರು ಎಂದು ಹೇಳಿದೆ.
ಈ ಪ್ರಕರಣದಲ್ಲಿ ಸಹಕರಿಸುವಂತೆ ರಿಸರ್ವ್ ಬ್ಯಾಂಕ್ ಮತ್ತು ಸೆಬಿ ಹಾಂಕ್ ಕಾಂಗ್ ನಲ್ಲಿರುವ ಸ್ಟಾಕ್ ಎಕ್ಸ್ ಚೇಂಜ್ ಗಳನ್ನು ಸಂಪರ್ಕಿಸಲಿದೆ ಎಂದು ಅಧಿಕಾರಿಗಳು ನಿನ್ನೆ ತಿಳಿಸಿದ್ದಾರೆ.
ಹಾಂಕ್ ಕಾಂಗ್ ನಲ್ಲಿರುವ ಭಾರತೀಯ ಮೂಲದ ಬ್ಯಾಂಕುಗಳ ಶಾಖೆಗಳಿಂದ ಸಾಲಗಳನ್ನು ಪಡೆದುಕೊಳ್ಳಲು ಎಲ್ಒಯುಗಳನ್ನು ಬಳಸಿಕೊಳ್ಳಲಾಗುತ್ತದೆ. 
ದಕ್ಷಿಣ ಆಫ್ರಿಕಾ ಸೇರಿದಂತೆ ವಜ್ರದ ಉದ್ಯಮಿಗಳು ಈ ಬ್ಯಾಂಕ್ ವಂಚನೆಯ ಹಿಂದೆ ವಿಚಾರಣೆಗೊಳಪಡುವ ಸಾಧ್ಯತೆಯಿದೆ. 
ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಸಂಸ್ಥೆ ಜೊತೆಗೆ ವ್ಯಾಪಾರ ಸಂಬಂಧ ಹೊಂದಿರುವ ಮತ್ತೊಂದು ಸಾರ್ವಜನಿಕ ವಲಯ ಬ್ಯಾಂಕನ್ನು ಕೂಡ ತನಿಖೆ ನಡೆಸುವ ಸಾಧ್ಯತೆಯಿದೆ.
ಈ ಮಧ್ಯೆ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ನಲ್ಲಿ ಸುಮಾರು 11,360 ಕೋಟಿ ರೂಪಾಯಿ ಅವ್ಯವಹಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಹಣಕಾಸು ಸಚಿವಾಲಯ ಎಲ್ಲಾ ಬ್ಯಾಂಕುಗಳಿಗೆ ವಸ್ತುಸ್ಥಿತಿ ವರದಿಯನ್ನು ಆದಷ್ಟು ಶೀಘ್ರದಲ್ಲಿ ಸಲ್ಲಿಸುವಂತೆ ಹೇಳಿದೆ.
ದೇಶಾದ್ಯಂತ ಭಾರೀ ಸುದ್ದಿ ಮಾಡಿದ್ದ ಸತ್ಯಂ ಕಂಪ್ಯೂಟರ್ಸ್ ನ 9,000 ಕೋಟಿ ರೂಪಾಯಿ ಹಗರಣಕ್ಕಿಂತ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಗರಣ ಇದುವರೆಗೆ ದೇಶದಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದ್ದು ಎಂದು ಹೇಳಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಎಲ್ಲಾ ಬ್ಯಾಂಕುಗಳಿಗೆ ಕಠಿಣ ಸೂಚನೆ ಹೊರಡಿಸಿರುವ ಹಣಕಾಸು ಸಚಿವಾಲಯ, ಹಗರಣದಲ್ಲಿ ಭಾಗಿಯಾಗಿರುವ ಯಾವುದೇ ದೊಡ್ಡ ತಿಮಿಂಗಿಲಗಳನ್ನು ಸುಮ್ಮನೆ ಬಿಡುವುದಿಲ್ಲ ಮತ್ತು ಪ್ರಾಮಾಣಿಕವಾಗಿ ಬ್ಯಾಂಕಿನಿಂದ ಸಾಲ ಪಡೆದುಕೊಂಡವರಿಗೆ ಕಿರುಕುಳ ನೀಡುವುದಿಲ್ಲ ಎಂದು ಅಭಯ ನೀಡಿದೆ.
ಇತರ ಸಾಲದಾತರನ್ನು ಪಂಜಾಬ್ ನ್ಯಾಷನಲ್ ಬ್ಯಾಂಕು ಹೆಸರಿಸದಿದ್ದರೂ ಕೂಡ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಆಕ್ಸಿಸ್ ಬ್ಯಾಂಕುಗಳು ಪಂಜಾಬ್ ನ್ಯಾಷನಲ್ ಬ್ಯಾಂಕು ಹೊರಡಿಸಿರುವ ಪತ್ರಗಳ(ಎಲ್ ಒಯು) ಆಧಾರದ ಮೇಲೆ ಸಾಲಗಳನ್ನು ನೀಡಿವೆ ಎಂದು ತಿಳಿದುಬಂದಿದೆ.
ಎಲ್ ಒಯು ಎಂದರೆ ಒಂದು ಬ್ಯಾಂಕು ಬೇರೆ ಬ್ಯಾಂಕುಗಳ ಶಾಖೆಗಳಿಗೆ ಪತ್ರವನ್ನು ಹೊರಡಿಸಿ ಅದರ ಆಧಾರದ ಮೇಲೆ ವಿದೇಶಿ ಶಾಖೆಗಳು ಸಾಲಗಳನ್ನು ಗ್ರಾಹಕರಿಗೆ ನೀಡುತ್ತದೆ. ವಿದೇಶಿ ಬ್ಯಾಂಕುಗಳ ಶಾಳೆಗಳನ್ನು ಕೂಡ ಇದೀಗ ತನಿಖೆ ನಡೆಸಲಾಗುತ್ತಿದೆ.
ಹಗರಣ ಬೆಳಕಿಗೆ ಬರುತ್ತಿದ್ದಂತೆ ಪಿಎನ್ ಬಿ 10 ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆಯನ್ನು ಸಿಬಿಐಗೆ ಉಲ್ಲೇಖಿಸಿದೆ.
ಇದು ಪ್ರತ್ಯೇಕ ಪ್ರಕರಣವಾಗಿದ್ದು ಬೇರೆ ಬ್ಯಾಂಕುಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸೇವೆ ಕಾರ್ಯದರ್ಶಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ವರದಿಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸುವಂತೆ ಹಣಕಾಸು ಸಚಿವಾಲಯ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದು, ಆ ಮೂಲಕ ಪ್ರಕರಣದ ತನಿಖೆಯನ್ನು ತೀವ್ರಗೊಳಿಸುವಂತೆ ಸೂಚಿಸಲಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT