ನವದೆಹಲಿ: ಕಳೆದ ನವೆಂಬರ್ ನಲ್ಲಿ 8 ತಿಂಗಳಿನಲ್ಲಿಯೇ ಗರಿಷ್ಟ ದಾಖಲೆ ಮುಟ್ಟಿದ ನಂತರ ಸತತ ಎರಡನೇ ಬಾರಿಗೆ ಭಾರತದ ವಾರ್ಷಿಕ ಸಗಟುಬೆಲೆ ಸೂಚ್ಯಂಕ ಹಣದುಬ್ಬರ ಕಳೆದ ತಿಂಗಳು ಜನವರಿಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಆಹಾರ ಮತ್ತು ಇಂಧನ ಬೆಲೆಗಳಲ್ಲಿ ಏರಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಸರ್ಕಾರದ ಅಂಕಿಅಂಶ ತಿಳಿಸಿದೆ.
ಕಳೆದ ವರ್ಷ ಜನವರಿಗಿಂತ ಈ ವರ್ಷ ಜನವರಿ ತಿಂಗಳಲ್ಲಿ ವಾರ್ಷಿಕ ಸಗಟು ಬೆಲೆ ಹಣದುಬ್ಬರ ಶೇಕಡಾ 2.84ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಹಣದುಬ್ಬರ ಪ್ರಮಾಣ ಶೇಕಡಾ 3.58ರಷ್ಟಿತ್ತು.
ರಾಯ್ಟರ್ಸ್ ನಡೆಸಿದ್ದ ಸಮೀಕ್ಷೆಯಲ್ಲಿ ಆರ್ಥಿಕತಜ್ಞರು ಹಣದುಬ್ಬರ ಶೇಕಡಾ 3.25ರಷ್ಟಾಗಬಹುದೆಂದು ಅಂದಾಜಿಸಿದ್ದರು.
ಸಗಟುಬೆಲೆ ಸೂಚ್ಯಂಕ ದರ ಜನವರಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 1.65ರಷ್ಟು ಏರಿಕೆಯಾಗಿದೆ. ಇದಕ್ಕೆ ಒಂದು ತಿಂಗಳು ಮೊದಲು ಶೇಕಡಾ 2.91ರಷ್ಟು ಏರಿಕೆಯಾಗಿತ್ತು ಎಂದು ಸರ್ಕಾರದ ಅಂಕಿಅಂಶ ತಿಳಿಸಿದೆ.