ಹೈದರಾಬಾದ್: ಫ್ಯೂಚರ್ ಸ್ಕಿಲ್ ವೇದಿಕೆಗೆ ಪ್ರಧಾನಿ ಮೋದಿ ಚಾಲನೆ, 4 ದಶಲಕ್ಷ ತಾಂತ್ರಿಕ ಉದ್ಯೋಗಿಗಳಿಗೆ ಕೌಶಲ್ಯ ತರಬೇತಿ 
ವಾಣಿಜ್ಯ

ಫ್ಯೂಚರ್ ಸ್ಕಿಲ್ಸ್ ವೇದಿಕೆಗೆ ಪ್ರಧಾನಿ ಮೋದಿ ಚಾಲನೆ, 4 ದಶಲಕ್ಷ ತಾಂತ್ರಿಕ ಉದ್ಯೋಗಿಗಳಿಗೆ ಕೌಶಲ್ಯ ತರಬೇತಿ

ಇಂದು ಸಾಕಷ್ಟು ತಾಂತ್ರಿಕ ಕೌಶಲ್ಯ ಹೊಂದಿದವರೂ ಸಹ ವೃತ್ತಿಪರ ಕೊರತೆ ಎದುರಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಹೈದರಾಬಾದ್: ಇಂದು ಸಾಕಷ್ಟು ತಾಂತ್ರಿಕ ಕೌಶಲ್ಯ ಹೊಂದಿದಾವರೂ ಸಹ ವೃತ್ತಿಪರ ಕೊರತೆ ಎದುರಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಹೈದರಾಬಾದ್ ನಲ್ಲಿ ನಾಸ್ಕಾಮ್ ಅಭಿವೃದ್ಧಿಪಡಿಸಿದ ಫ್ಯೂಚರ್ ಸ್ಕಿಲ್ಸ್ ಆನ್ ಲೈನ್ ಕೌಶಲ್ಯ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಫ್ಯೂಚರ್ ಸ್ಕಿಲ್ ಪ್ಲಾಟ್ಫಾರ್ಮ್ ಹೊಸ ವಯೋಮಾನದ ಐಟಿ ವೃತ್ತಿಪರರಿಗೆ ಅಗತ್ಯವಾದ ಕೌಶಲ್ಯಗಳನ್ನು ನೀಡಲಿದೆ ಎನ್ನುವ ನಿರೀಕ್ಷೆ ಇದೆ.  ನಾಸ್ಕಾಮ್ ಅಧ್ಯಕ್ಷ ಅಧ್ಯಕ್ಷ ಆರ್. ಚಂದ್ರಶೇಖರ್ ಆರಂಭಿಕ ಅವಧಿಯಲ್ಲಿ, ಫ್ಯೂಚರ್ ಸ್ಕಿಲ್ಸ್ 4 ದಶಲಕ್ಷ ಹೊಸ ಮತ್ತು ಹಳೆಯ ಉದ್ಯೋಗಿಗಳಿಗೆ ಉಪಯೋಗವಾಗಲಿದೆ ಎಂದಿದ್ದಾರೆ.
ಭಾರತವು ಡಿಜಿಟಲ್ ಕ್ರಾಂತಿಯ ಹಾದಿಯಲ್ಲಿದೆ ಆದಾಗ್ಯೂ, ಬ್ಲಾಕ್ ಚೈನ್ ನಂತಹ ತಂತ್ರಜ್ಞಾನದ ಪ್ರಗತಿಗೆ ಕೌಶಲ್ಯ ಯೋಜನೆಗಳಲ್ಲಿ ತ್ವರಿತ ಬದಲಾವಣೆ ಬೇಕಾಗುತ್ತದೆ.  "ಸಾರ್ವಜನಿಕರಿಗೆ ಉಪಯುಕ್ತವಾದ ತಂತ್ರಜ್ಞಾನವನ್ನು ಬಳಸಬೇಕು. ಹಾಗೆ ಮಾಡಿದಾಗ ಮನುಕುಲಕ್ಕೆ ಶಾಶ್ವತ ಸಮೃದ್ಧಿಯನ್ನು ಮತ್ತು ಸುಸ್ಥಿರ ಭವಿಷ್ಯವನ್ನು ಒದಗಿಸಬಹುದು., ಬ್ಲಾಕ್-ಚೈನ್ ಮತ್ತು ಇಂಟರ್ ನೆಟ್ ನಂತಹಾ ಜಾಗತಿಕ ತಂತ್ರಜ್ಞಾನಗಳು ನಮ್ಮ ಜೀವನ ಮತ್ತು ಕೆಲಸ ಮಾಡುವ ರೀತಿಯ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಕೆಲಸದ ಸ್ಥಳಗಳಲ್ಲಿ ತ್ವರಿತ ಪ್ರಗತಿಗಾಮಿಯಾದ ತಂತ್ರಜ್ಞಾನಗಳು ಬೇಕಾಗಲಿದೆ'' ಎಂದು ಮೋದಿ ಹೇಳಿದ್ದಾರೆ.
"ಭಾರತವು ಎಲ್ಲಾ ವಲಯಗಳಲ್ಲೂ ಡಿಜಿಟಲ್ ತಂತ್ರಜ್ಞಾನದ ಹಾಟ್ ಫೇವರೆಟ್ ಆಗಿದೆ.  ನಾವು ನವೋದ್ಯಮಗಳನ್ನು ಹೊಂದಿರುವುದಲ್ಲದೆ ನವೀನ ರೀತಿಯ ಟೆಕ್ ಮಾರುಕಟ್ಟೆಯನ್ನು ಹೊಂದಿದ್ದೇವೆ."  ಈ ಕ್ಷೇತ್ರದಲ್ಲಿ ಭಾರತವು ಹೊಂದಿರುವ ಸಾಮರ್ಥ್ಯದ ಬಗೆಗೆ ಮೋದಿ ತಮ್ಮ ಮಾತುಗಳಲ್ಲಿ ವಿವರಿಸಿದರು.
ಕಳೆದ ಕೆಲ ವರ್ಷಗಳಲ್ಲಿ   ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಪ್ರಗತಿ ಯಾರೂ ಯೋಚಿಸಿರದಷ್ಟು ಮುಂದೆ ಹೋಗಿದೆ ಎಂದು ಮೋದಿ ಹೇಳಿದ್ದಾರೆ. "ಸಾರ್ವಜನಿಕ ನಡವಳಿಕೆ ಮತ್ತು ಕಾರ್ಯವಿಧಾನದ ಬದಲಾವಣೆಯ ಮೂಲಕ ಇದು ಸಾಧ್ಯವಾಗಿದೆ. ಡಿಜಿಟಲ್ ಇಂಡಿಯಾವು ಕೇವಲ ಸರ್ಕಾರದ ಉಪಕ್ರಮವಾಗಿ ಉಳಿದಿಲ್ಲ, ಅದು ಜೀವನದ ಮಾರ್ಗವಾಗಿದೆ. ತಂತ್ರಜ್ಞಾನವು ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ಮೀರಿಸಿದೆ ಮತ್ತು ಜನರ ಜೀವನದಲ್ಲಿ ಬೇರ್ಪಡಿಸಲಾಗದ ಭಾಗವಾಗಿದೆ. " ಅವರು ಹೇಳಿದರು.
ಫ್ಯೂಚರ್ ಸ್ಕಿಲ್ಸ್ ಆನ್ ಲೈನ್ ವೇದಿಕೆಯು ನೂತನ ಮಾದರಿಯ ಟೆಕ್ ಕೌಶಲ್ಯ ತರಬೇತಿಯೊಡನೆ ಐಟಿ ಉದ್ಯೋಗಿಗಳ ಕೌಶಲ್ಯಾಭಿವೃದ್ದಿಗೆ ಸಾಕಷ್ಟು ನೆರವು ಒದಗಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT