ನೀರವ್ ಮೋದಿ 
ವಾಣಿಜ್ಯ

ಪಿಎನ್ ಬಿ ಗೆ ಸಾಲ ವಾಪಸ್ ಪಡೆಯಲು ಇದ್ದ ಆಯ್ಕೆಗಳೆಲ್ಲವೂ ಮುಚ್ಚಿದೆ: ನೀರವ್ ಮೋದಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿರುವ ನೀರವ್ ಮೋದಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಅತ್ಯುತ್ಸಾಹ ಬಾಕಿ ಇರುವ ಮೊತ್ತವನ್ನು ವಾಪಸ್ ಪಡೆಯುವ ಎಲ್ಲಾ...

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿರುವ ನೀರವ್ ಮೋದಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಅತ್ಯುತ್ಸಾಹ ಬಾಕಿ ಇರುವ ಮೊತ್ತವನ್ನು ವಾಪಸ್ ಪಡೆಯುವ ಎಲ್ಲಾ ಆಯ್ಕೆಗಳನ್ನೂ ಇಲ್ಲವಾಗಿಸಿದೆ ಎಂದು ಹೇಳಿದ್ದಾರೆ. 
ಫೆ.15-16 ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯಾನೇಜ್ಮೆಂಟ್ ಗೆ ಪತ್ರ ಬರೆದಿರುವ ನೀರವ್ ಮೋದಿ, ತಪ್ಪಾಗಿ ಉಲ್ಲೇಖಿಸಲಾದ ಸಾಲದ ಹೊಣೆಗಾರಿಕೆ ಮಾಧ್ಯಮಗಳಿಗೆ ಆಹಾರವಾಗಿತ್ತು, ಪರಿಣಾಮವಾಗಿ ತಕ್ಷಣವೇ ಶೋಧ ಕಾರ್ಯಾಚರಣೆ ಹಾಗೂ ಮುಟ್ಟುಗೋಲು ಪ್ರಕ್ರಿಯೆ ನಡೆಯಿತು, ಇದರಿಂದಾಗಿ ಫೈರ್ ಸ್ಟಾರ್ ಇಂಟರ್ ನ್ಯಾಷನಲ್ ಹಾಗೂ ಫೈರ್ ಸ್ಟಾರ್ ಡೈಮಂಡ್ ಇಂಟರ್ನ್ಯಾಷನಲ್ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ ಒಡೆತನದ ಸಂಸ್ಥೆಗಳ ಬಾಕಿ ಮೊತ್ತವನ್ನು ಬ್ಯಾಂಕ್ ಗಳಿಗೆ ಪಾವತಿ ಮಾಡುವ ನಮ್ಮ ಸಾಮರ್ಥ್ಯಕ್ಕೇ ಕೊಡಲಿ ಪೆಟ್ಟು ಬಿತ್ತು ಎಂದು ನೀರವ್ ಮೋದಿ ಆರೋಪಿಸಿದ್ದಾರೆ. 
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿರುದ್ಧವೇ ಆರೋಪ ಮಾಡಿರುವ ನೀರವ್ ಮೋದಿ, ನಿಮ್ಮ ಬ್ಯಾಂಕ್ ಕೈಗೊಂಡಿರುವ ಕ್ರಮಗಳಿಂದ ನನ್ನ ಉದ್ಯಮದ ಬ್ರ್ಯಾಂಡ್ ಗೆ ಹೊಡೆತ ಬಿದ್ದಿದೆ, ನೀವು ಕೈಗೊಂಡಿರುವ ಕ್ರಮಗಳು ಸಾಲ ವಾಪಸ್ ಪಡೆದುಕೊಳ್ಳಲು ನಿಮಗೆ ಇದ್ದ ಆಯ್ಕೆಗಳೆಲ್ಲವನ್ನೂ ಸೀಮಿತಗೊಳಿಸಿವೆ ಎಂದು ಕಿಡಿ ಕಾರಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

'ಬೆಂಗಳೂರಿನಲ್ಲಿ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ಮುಚ್ಚುತ್ತೇವೆ': GBA ಮುಖ್ಯ ಆಯುಕ್ತ ಮಹೇಶ್ವರ ರಾವ್

ಟಿವಿ, ಒಟಿಟಿಗೆ ಬರುತ್ತಾ 'ಪ್ರೇಮದ ಊರಲಿ'? ಚಿತ್ರತಂಡ ಹೇಳಿದ್ದೇನು?