ವಾಣಿಜ್ಯ

ಪಿಎನ್ ಬಿ ವಂಚನೆ: ನಕಲಿ ಕಂಪನಿಗಳ ಮೇಲೆ ಇಡಿ ದಾಳಿ, 145 ಕೋಟಿ ರೂ ಮೊತ್ತದ ಆಸ್ತಿ ವಶಕ್ಕೆ

Srinivas Rao BV

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯನ್ನು ಮುಂದುವರೆಸಿರುವ ಜಾರಿ ನಿರ್ದೇಶನಾಲಯ 17 ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ನಕಲಿ ಕಂಪನಿಗಳ ಮೇಲೆಯೂ ದಾಳಿಯನ್ನು ನಡೆಸಿದೆ.

ಇದೇ ವೇಳೆ ಆದಾಯ ತೆರಿಗೆ ಇಲಾಖೆ ನೀರವ್ ಮೋದಿಗೆ ಸಂಬಂಧಿಸಿದ 145 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ವಶಕ್ಕೆ ಪಡೆದಿದ್ದು, ಜಾರಿ ನಿರ್ದೇಶನಾಲಯ 10 ಕೋಟಿ ರೂ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ತೆರಿಗೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಒಟ್ಟು 141 ಬ್ಯಾಂಕ್ ಗಳಿಂದ 145.74 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದ್ದು, ತೆರಿಗೆಗೆ ಸಂಬಂಧಪಟ್ಟಿದ್ದಾಗಿದೆ ಎಂದು ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ಒಟ್ಟಾರೆ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿರುವ ಆಸ್ತಿಯ ಮೌಲ್ಯ 5,736 ಕೋಟಿ ರೂಪಾಯಿಯಷ್ಟಾಗಿದೆ.

SCROLL FOR NEXT