ವಾಣಿಜ್ಯ

7 ಕೋಟಿ ಜಿಎಸ್ ಟಿ ವಂಚನೆ: ಇಬ್ಬರ ಬಂಧನ

Srinivas Rao BV
ಮುಂಬೈ: ಸುಮಾರು 7 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳ ನಿರ್ದೇಶಕರನ್ನು ಜಿಎಸ್ ಟಿ ಅಧಿಕಾರಿಗಳು ಬಂಧಿಸಿದ್ದಾರೆ. 
ಜಿಎಸ್ ಟಿ ಜಾರಿಯಾದ ಬಳಿಕ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಮೊದಲ ಬಂಧನ ಇದಾಗಿದೆ. 
ಸಿಜಿಎಸ್ ಟಿ ಮುಂಬೈ ಕೇಂದ್ರ ಕಮಿಷನರೇಟ್  ಷಾ ಬ್ರದರ್ಸ್ ಇಸ್ಪ್ಯಾಟ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಸಂಜೀವ್ ಪ್ರವೀಣ್ ಮೆಹ್ತಾ ಹಾಗೂ ವಿಎನ್ ಇಂಡಸ್ಟ್ರೀಸ್ ನ ನಿರ್ದೇಶಕ ವಿನಯ್ ಕುಮಾರ್ ಡಿ ಆರ್ಯ ನನ್ನು  ಬಂಧಿಸಲಾಗಿದೆ. 
ಷಾ ಬ್ರದರ್ಸ್ ಇಸ್ಪ್ಯಾಟ್ ಸಂಸ್ಥೆ ನಡೆಸಿರುವ ವಂಚನೆಯ ಪ್ರಮಾಣ 5 ಕೋಟಿಯಾಗಿದ್ದು ಜಾಮೀನು ರಹಿತ ಅಪರಾಧವಾಗಿದ್ದರೆ, ವಿಎನ್ ಇಂಡಸ್ಟ್ರಿಯದ್ದು 5 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತವಾದ್ದರಿಂದ ಜಾಮೀನು ಸಿಗಬಹುದಾದಂತಹ ಅಪರಾಧವಾಗಿದೆ. 
ಇಂತಹದ್ದೇ ಪ್ರಕರಣಗಳು ಬೇರೆ ಸಂಸ್ಥೆಗಳಲ್ಲಿಯೂ ನಡೆದಿರಬಹುದು ಎಂದು ತೆರಿಗೆ ಅಧಿಕಾರಿಗಳು ಹೇಳಿದ್ದಾರೆ. 
SCROLL FOR NEXT