ನವದೆಹಲಿ: ಭಾರತದ ನೇರ ತೆರಿಗೆ ಸಂಗ್ರಹ ಏಪ್ರಿಲ್-ಡಿಸೆಂಬರ್ ತಿಂಗಳಲ್ಲಿ 6.56 ಲಕ್ಷಯಷ್ಟಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.18.2 ರಷ್ಟು ಏರಿಕೆಯಾಗಿದೆ.
ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಡಿಸೆಂಬರ್ ನ ವರೆಗೆ ಸಂಗ್ರಹವಾಗಿರುವ ತೆರಿಗೆ 2017-18 ನೇ ಸಾಲಿನ ಒಟ್ಟು ಬಜೆಟ್ ಅಂದಾಜಿನ ಶೇ.67ರಷ್ಟನ್ನು ಪ್ರತಿನಿಧಿಸುತ್ತದೆ. 2017 ರ ಡಿಸೆಂಬರ್ ವರೆಗೆ ಸಂಗ್ರಹವಾಗಿರುವ ತೆರಿಗೆ ಕಳೆದ ವರ್ಷಕ್ಕಿಂತಲೂ ಶೇ.18.2 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಇಲಾಖೆ ಟ್ವೀಟ್ ಮಾಡಿದೆ.
ನೇರ ತೆರಿಗೆಯ ಸಂಗ್ರಹಣೆ ಶೇ.67 ರಷ್ಟು ಒಟ್ಟು ಬಜೆಟ್ ನ ಅಂದಾಜಿನಲ್ಲಿರಲಿದ್ದು 2017-18 ಕ್ಕೆ 9.8 ಲಕ್ಷ ಕೋಟಿಯಷ್ಟಾಗಲಿದೆ ಎಂದು ಹಣಕಾಸು ಇಲಾಖೆ ಮಾಡಿರುವ ಟ್ವೀಟ್ ಮೂಲಕ ತಿಳಿದುಬಂದಿದೆ. ನೇರ ತೆರಿಗೆಯ ಕೇಂದ್ರ ಮಂಡಳಿ (ಸಿಬಿಡಿಟಿ) ಪ್ರಕಾರ ರಿಫಂಡ್ಸ್ ನ್ನು ಅಂತಿಮಗೊಳಿಸುವುದಕ್ಕೂ ಮುನ್ನ 7.68 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹವಾಗಿತ್ತು, ಮರುಪಾವತಿ ಮೊತ್ತ 1.12 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. ಇನ್ನು 3.18 ಲಕ್ಷ ಕೋಟಿ ರೂಪಾಯಿ ಮುಂಗಡ ತೆರಿಗೆ ಸಂಗ್ರಹವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos