ವಾಣಿಜ್ಯ

ಕೃಷಿಗೆ ಹೆಚ್ಚಿನ ಆದ್ಯತೆ, ರೈತರಿಗೆ ತಲುಪಿದರಷ್ಟೇ ಜಿಡಿಪಿ ಬೆಳವಣಿಗೆ ಪ್ರಯೋಜನಕಾರಿ: ಜೆಟ್ಲಿ

Srinivas Rao BV
ನವದೆಹಲಿ: ಕೃಷಿಯೇ ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ರೈತರಿಗೆ ತಲುಪಿದರಷ್ಟೇ ಜಿಡಿಪಿ ಬೆಳವಣಿಗೆ ಪ್ರಯೋಜನಕಾರಿಯಾಗಿರಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ಕಡಿಮೆ ಇರಲಿದೆ ಎಂದು ಅಂದಾಜು ಮಾಡಲಾಗಿದ್ದು, ಫೆ.1 ರಂದು ಕೇಂದ್ರ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ, ಈ ಹಿನ್ನೆಲೆಯಲ್ಲಿ ಅರುಣ್ ಜೇಟ್ಲಿ ಹೇಳಿಕೆ ಮಹತ್ವ ಪಡೆದುಕೊಂಡಿದೆ. 
ಇನ್ನು ಮಾರುಕಟ್ಟೆ ವಿಶ್ಲೇಷಕರೂ ಸಹ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಿದೆ ಎಂದು ವಿಶ್ಲೇಷಿಸುತ್ತಿದ್ದಾರೆ. ಭಾರತ ಅತ್ಯಂತ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.  ದೇಶದ ಹೆಚ್ಚಿನ ಜನಸಂಖ್ಯೆ ಕೃಷಿ ಆಧಾರಿತವಾಗಿದೆ. ರೈತರನ್ನು ತಲುಪದ ಆರ್ಥಿಕ ಬೆಳವಣಿಗೆ ನಿಷ್ಪ್ರಯೋಜನಕಾರಿಯಾಗಲಿದೆ ಎಂದು ಹೇಳುವ ಮೂಲಕ ತಮ್ಮ ಮುಂದಿನ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಸುಳಿವು ನೀಡಿದ್ದಾರೆ. 
SCROLL FOR NEXT