ನವದೆಹಲಿ: ಕೃಷಿ ಸರಕುಗಳ ವ್ಯಾಪಾರ ಆರಂಭಿಸುವುದರಿಂದ ಬಹುಪಾಲು ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ದೇಶದ ಮೊದಲ ಅಲಸಂದೆ ಕಾಳು ಕೃಷಿ ಸಂಬಂಧಿತ ವೈವಿದ್ಯಮಯ ತಳಿಗಳ ಮಳಿಗೆ ಉದ್ಘಾಟನೆಮಾಡಿದ್ದ ಜೇಟ್ಲಿ ಭಾರತೀಯ ಆರ್ಥಿಕತೆಯಲ್ಲಿ ರೈತ ಸಮುದಾಯದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ್ದಾರೆ, ಸಮಾಜದ ಎಲ್ಲಾ ವರ್ಗಗಳನ್ನು, ಅದರಲ್ಲೂ ವಿಶೇಷವಾಗಿ ರೈತರಿಗೆ ಆರ್ಥಿಕ ಬೆಳವಣಿಗೆಯ ಲಾಭಗಳು ಸಿಗುವಂತೆ ಮಾಡಲುಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
"ರೈತರು ತಮ್ಮ ಶ್ರಮದ ಕೆಲಸ ಗಳಿಂದ ವ್ಯತಿರಿಕ್ತ ಪರಿಸ್ಥಿತಿಯನ್ನು ಬದಲಿಸಿದ್ದಾರೆ. ಆದಾಗ್ಯೂ, ಅನೇಕ ಬಾರಿ, ಅವರು ತಮ್ಮ ಉತ್ಪಾದನೆಗೆ ತಕ್ಕ ಬೆಲೆ ಸಿಗದೆ ಕಷ್ಟವನ್ನು ಅನುಭವಿಸಿದ್ದಾರೆ. ಕಳೆದ ವರ್ಷಗಳಲ್ಲಿ ನಾವು ರೈತರ ಪರವಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಿದರಿಂದ ರೈತರಿಗೆ ಅನುಕೂಲವಾಗುತ್ತಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ, ನಾವು ಯೋಜನೆ ರೂಪಿಸುತ್ತಿದ್ದೇವೆ" ಜೇಟ್ಲಿ ಹೇಳಿದರು.
ರಾಷ್ಟ್ರೀಯ ಸರಕು ಮತ್ತು ಉತ್ಪನ್ನಗಳ ವಿನಿಮಯ (ಎನ್ ಸಿಡಿಇಎಕ್ಸ್) ವಿನ್ಯಾಸಗೊಳಿಸಿದ ಈ ಸರಕನ್ನು ತಮ್ಮ ಉತ್ಪಾದನೆಗಾಗಿ ನಿರ್ದಿಷ್ಠ ಬೆಲೆ ಪಡೆಯುವಲ್ಲಿ ರೈತರಿಗೆ ಸಹಕಾರಿಆಗಲಿದೆ ಎಂದು ನಿರೀಕ್ಷಿಆಲಾಗಿದೆ. ಹೆಡ್ಜಿಂಗ್ ಟೂಲ್ ರೈತರಿಗಾಗುವ ನಷ್ಟವನ್ನು ತಪ್ಪಿಸುತ್ತದೆ ಹಾಗೂ ದರ ಸಮರದ ವೇಳೆ ಅವರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವುದಕ್ಕೆ ಸಹಕಾರ ನೀಡುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics