ವಾಣಿಜ್ಯ

ಟೆಲಿಕಾಂ ಕ್ಷೇತ್ರದಲ್ಲಿ ಮುಂದುವರೆಯಲಿರುವ ಉದ್ಯೋಗ ಕಡಿತ, ತೂಗುಗತ್ತಿ ಕೆಳಗೆ 90,000 ಉದ್ಯೋಗಗಳು!

Srinivas Rao BV
ಮುಂಬೈ: ಅತ್ಯಂತ ಬೇಡಿಕೆ ಕ್ಷೇತ್ರವಾಗಿದ್ದ ಟೆಲಿಕಾಂ ಈಗ ಉದ್ಯೋಗ ಕಡಿತ ಎದುರಿಸುತ್ತಿದ್ದು, ಮುಂದಿನ 6-9 ತಿಂಗಳಲ್ಲಿ ಉದ್ಯೋಗ ಕಡಿತದ ಸಂಖ್ಯೆ 80,000-90,000 ದಾಟಲಿದೆ ಎಂದು ವರದಿಯೊಂದು ತಿಳಿಸಿದೆ. 
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೈಪೋಟಿ ಹಾಗೂ ಕಡಿಮೆ ಲಾಭ ಹೆಚ್ಚು ಉದ್ಯೋಗ ಕಡಿತಕ್ಕೆ ಕಾರಣವಾಗುತ್ತಿದ್ದು, ಟೆಲಿಕಾಂ ಕ್ಷೇತ್ರದ ಉದ್ಯೋಗಗಳು ಅನಿಶ್ಚಿತತೆ ಎದುರಿಸುತ್ತಿವೆ ಎಂದು ಸಿಐಇಎಲ್ ಹೆಚ್ ಆರ್ ಸರ್ವಿಸಸ್ ತನ್ನ ವರದಿಯಲ್ಲಿ ತಿಳಿಸಿದೆ. 
65 ಟೆಲಿಕಾಂ, ಸಾಫ್ಟ್ ವೇರ್, ಹಾರ್ಡ್ ವೇರ್ ಸೇವೆ ಪೂರೈಕೆದಾರ ಸಂಸ್ಥೆಗಳ ಸುಮಾರು 100 ಹಿರಿಯ ಹಾಗೂ ಮಧ್ಯಮ ವರ್ಗದ ಉದ್ಯೋಗಿಗಳನ್ನು ಸಮೀಕ್ಷೆಗೊಳಪಡಿಸಿ ಈ ವರದಿ ತಯಾರಿಸಲಾಗಿದ್ದು, ವರದಿಯ ಪ್ರಕಾರ ಕಳೆದ ವರ್ಷ 40,000 ಜನರು ಕೆಲಸ ಕಳೆದುಕೊಂಡಿದ್ದರು ಹಾಗೂ ಇದೇ ಟ್ರೆಂಡ್ ಇನ್ನು 6-9 ತಿಂಗಳು ಮುಂದುವರೆಯಲಿದ್ದು ಉದ್ಯೋಗ ಕಡಿತದ ಸಂಖ್ಯೆ 80,000-90,000 ಮುಟ್ಟಲಿದೆ ಎಂದು ಹೇಳಿದೆ. 
SCROLL FOR NEXT