ದೇಶದ ಶೆ.73 ರಷ್ಟು ಸಂಪತ್ತು ಉತ್ಪಾದನೆ ಹಿಂದಿಕ್ಕಿದ ಶೇ.1 ರಷ್ಟು ಭಾರತೀಯ ಶ್ರೀಮಂತರು!
ದಾವೂಸ್: ದಾವೂಸ್ ನಲ್ಲಿ 48 ನೇ ವಿಶ್ವ ಆರ್ಥಿಕ ವೇದಿಕೆ ಸಭೆ ನಡೆಯುವುದಕ್ಕೂ ಮುನ್ನ ಭಾರತೀಯ ಶ್ರೀಮಂತರ ಕುರಿತು ಕುತೂಹಲಕಾರಿ ಸಮೀಕ್ಷಾ ವರದಿ ಪ್ರಕಟಗೊಂಡಿದ್ದು, 2017 ರಲ್ಲಿ ದೇಶದ ಶೇ.73 ರಷ್ಟು ಸಂಪತ್ತು ಉತ್ಪಾದನೆಯನ್ನು ಶೇ.1 ರಷ್ಟು ಭಾರತೀಯ ಶ್ರೀಮಂತರು ಹಿಂದಿಕ್ಕಿದ್ದಾರೆ ಎಂದು ತಿಳಿದುಬಂದಿದೆ.
ಅಂದರೆ ಇಡೀ ದೇಶದ ಶೇ.73 ರಷ್ಟು ಸಂಪತ್ತು ಉತ್ಪಾದನೆಗೆ ಶೇ.1 ರಷ್ಟಿರುವ ಭಾರತೀಯ ಶ್ರೀಮಂತರ ಸಂಪತ್ತು ಉತ್ಪಾದನೆಗೆ ಸಮವಾಗಿದೆ. ಇನ್ನು ದೇಶದ ಅತಿ ಬಡತನದಲ್ಲಿರುವ ಜನರ ಸಂಪತ್ತು ಕೇವಲ ಶೇ.1 ರಷ್ಟು ಹೆಚ್ಚಾಗಿದೆಯಷ್ಟೇ ಎಂದು ಆಕ್ಸ್ಫಮ್ ಸಂಸ್ಥೆ ಸಮೀಕ್ಷಾ ವರದಿ ಮೂಲಕ ತಿಳಿದುಬಂದಿದೆ.
ಇನ್ನು ಜಾಗತಿಕ ಅಂಕಿ-ಅಂಶಗಳೂ ಇದೇ ರೀತಿಯಲ್ಲಿದ್ದು ಜಾಗತಿಕವಾಗಿ ಉತ್ಪಾದನೆಯಾಗುವ ಶೇ.82 ರಷ್ಟು ಸಂಪತ್ತನ್ನು ಜಾಗತಿಕ ಮಟ್ಟದಲ್ಲಿರುವ ಶೇ.1 ರಷ್ಟು ಶ್ರೀಮಂತರು ಹಿಂದಿಕ್ಕಿದ್ದಾರೆ ಎಂದು ಆಕ್ಸ್ಫಮ್ ವರದಿ ಮೂಲಕ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics