ವಾಣಿಜ್ಯ

ಕ್ರಿಪ್ಟೋಕರೆನ್ಸಿ ಜಾಹಿರಾತುಗಳನ್ನು ನಿಷೇಧಿಸಿದ ಫೇಸ್ ಬುಕ್

Sumana Upadhyaya
ಸಾನ್ ಫ್ರಾನ್ಸಿಸ್ಕೊ: ಬಿಟ್ ಕಾಯಿನ್ ನಂತಹ ಕ್ರಿಪ್ಟೊಕರೆನ್ಸಿಗಳ ವಹಿವಾಟುಗಳನ್ನು ಉತ್ತೇಜಿಸುವ ಜಾಹಿರಾತುಗಳನ್ನು ಫೇಸ್ ಬುಕ್ ನಿಷೇಧಿಸಿದೆ. ಇನ್ಸ್ಟಾಗ್ರಾಮ್, ಆಡಿಯನ್ಸ್ ನೆಟ್ ವರ್ಕ್ ಮತ್ತು ಮೆಸ್ಸೆಂಜರ್ ಗಳಂತಹ ಆಯ್ಕೆಗಳಿಗೆ ಸಹ ಫೇಸ್ ಬುಕ್ ನಿಷೇಧಿಸಿದೆ.
ಜನರನ್ನು ತಪ್ಪುಹಾದಿಗೆಳೆಯುವ ಅಥವಾ ಮೋಸಗೊಳಿಸುವ ಪ್ರಚಾರಗಳಿಗೆ ಒಡ್ಡುವ ಹಣಕಾಸು ವಹಿವಾಟುಗಳ ಜಾಹಿರಾತುಗಳನ್ನು ಹೊಸ ನಿಯಮದಡಿ ನಿಷೇಧಿಸಲಾಗುವುದು ಎಂದು ಫೇಸ್ ಬುಕ್ ಹೇಳಿಕೆಯಲ್ಲಿ ತಿಳಿಸಿದೆ.
ಮಾರುಕಟ್ಟೆಯಲ್ಲಿ ಬರುವ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ವಂಚನೆ ಅಥವಾ ಮೋಸ ಹೊಂದುವ ಆತಂಕವಿಲ್ಲದೆ ಗ್ರಾಹಕರು ಫೇಸ್ ಬುಕ್ ಜಾಹಿರಾತುಗಳನ್ನು ನೋಡಿ ಪಡೆಯುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಫೇಸ್ ಬುಕ್ ಹೇಳಿದೆ.
ಐಸಿಒ ಮತ್ತು ಕ್ರಿಪ್ಟೊಕರೆನ್ಸಿಯಂತಹ ಹಣಕಾಸು ವಹಿವಾಟಿನ ಆಯ್ಕೆಗಳನ್ನು ತೋರಿಸುವ ಹಲವು ಕಂಪೆನಿಗಳು ಜಾಹಿರಾತು ನೀಡುತ್ತವೆ. ಅವುಗಳ ಮೇಲೆ ಸಾಕಷ್ಟು ಜನತೆಗೆ ಇನ್ನೂ ವಿಶ್ವಾಸತೆ ಬಂದಿಲ್ಲ ಎಂದು ಫೇಸ್ ಬುಕ್ ನ ಉತ್ಪನ್ನ ವ್ಯವಸ್ಥಾಪಕ ನಿರ್ದೇಶಕ ರಾಬ್ ಲೀತರ್ನ್ ತಿಳಿಸಿದ್ದಾರೆ.
SCROLL FOR NEXT