ವಾಣಿಜ್ಯ

ಐಸಿಐಸಿ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೊಚ್ಚರ್ ಗೆ ಮತ್ತಷ್ಟು ಸಂಕಷ್ಟ; ಅಮೆರಿಕಾ ಷೇರು ಪ್ರಾಧಿಕಾರದಿಂದ ವಿಚಾರಣೆ

Sumana Upadhyaya

ನವದೆಹಲಿ: ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೊಚ್ಚರ್ ಮತ್ತು ಆಕೆಯ ಕುಟುಂಬದವರು ಭಾಗಿಯಾಗಿ ವ್ಯವಹಾರದಲ್ಲಿ ಅಕ್ರಮವೆಸಗಿದ್ದಾರೆ ಎಂದು ಕೇಳಿಬರುತ್ತಿರುವ ಆರೋಪಗಳಿಗೆ ಸಂಬಂಧಪಟ್ಟಂತೆ ಭಾರತದಲ್ಲಿ ಹಲವು ತನಿಖಾ ಸಂಸ್ಥೆಗಳು ತನಿಖೆಯನ್ನು ಮುಂದುವರಿಸಿರುವಾಗಲೇ ಅಮೆರಿಕಾದ ಷೇರುಮಾರುಕಟ್ಟೆ ಪ್ರಾಧಿಕಾರದ(ಎಸ್ಇಸಿ) ತನಿಖೆಗೆ ಒಳಪಟ್ಟ ಮತ್ತೊಂದು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಮಾರಿಷಸ್ ಸೇರಿದಂತೆ ಕೆಲವು ವಿದೇಶಿ ರಾಷ್ಟ್ರಗಳ ಸಹಾಯವನ್ನು ಭಾರತದ ಪ್ರಾಧಿಕಾರಗಳು ಮತ್ತು ತನಿಖಾ ಸಂಸ್ಥೆಗಳು ಕೋರುತ್ತಿರುವ ಬೆನ್ನಲ್ಲೇ ಅಮೆರಿಕಾದ ಪ್ರಾಧಿಕಾರದ ಕೆಂಗಣ್ಣಿಗೆ ಕೂಡ ಗುರಿಯಾಗಿರುವುದು ವಿಷಯವನ್ನು ಮತ್ತಷ್ಟು ಗಂಭೀರವಾಗಿಸಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅಮೆರಿಕಾದ ಪ್ರಾಧಿಕಾರ ನಿರಾಕರಿಸಿದೆ. ಐಸಿಐಸಿಐ ಬ್ಯಾಂಕು ಕೂಡ ಇದಕ್ಕೆ ಪ್ರತಿಕ್ರಿಯಿಸಿಲ್ಲ.

ಐಸಿಐಸಿಐ ಬ್ಯಾಂಕು ಮೂಲಕ ಅವ್ಯವಹಾರ ನಡೆದಿದೆ ಎಂದು ಕಳೆದ ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ ಆರೋಪ ಕೇಳಿಬಂದಾಗ ಬ್ಯಾಂಕಿನ ಮಂಡಳಿ ಚಂದಾ ಕೊಚ್ಚರ್ ಬಗ್ಗೆ ಸಂಪೂರ್ಣ ವಿಶ್ವಾಸ ಮತ್ತು ನಂಬಿಕೆಯಿದೆ ಎಂದು ಹೇಳಿತ್ತು.

ಅಮೆರಿಕಾದ ಸೆಕ್ಯುರಿಟೀಸ್ ಮತ್ತು ಎಕ್ಸ್ ಚೇಂಜ್ ಆಯೋಗ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು, ಅದು ಈಗಾಗಲೇ ಐಸಿಐಸಿಐ ಬ್ಯಾಂಕ್ ಮತ್ತು ಚಂದಾ ಕೊಚ್ಚರ್ ಗೆ ನೊಟೀಸ್ ನೀಡಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT