ಭುವನೇಶ್ವರ್: ಶೇಕಡ 80 ರಷ್ಟು ಮಂದಿ ಸಂಬಳದಾರರು ನಿವೃತ್ತಿಗಾಗಿ ಸಿದ್ಧವಾಗಿಲ್ಲವೆಂದು ಒಪ್ಪಿಕೊಳ್ಳುತ್ತಾರೆ, ಆದರೂ ಹೆಚ್ಚಿನ ಜನರು ಸಾಮಾನ್ಯ ಜನರಿಗಿಂತ ಹೆಚ್ಚು ಖರ್ಚು ಮಾಡುತ್ತಾರೆ. ಖರ್ಚನ್ನು ಸರಿದೂಗಿಸಲು ಸಾಲಕ್ಕೆ ಮೊರೆ ಹೋಗುತ್ತಾರೆ. ಆದರೆ, ನಿವೃತ್ತಿಯೊಳಗೆ ಸಾಲದಿಂದ ಮುಕ್ತಗೊಳ್ಳಲು ನಾವು ಏನು ಮಾಡಬೇಕು?
ಸರಿಯಾದ ಯೋಜನೆ ಹಾಕಿಕೊಂಡರೆ. ಸರಿಯಾದ ವೇಳೆಯಲ್ಲಿಯೇ ಉತ್ತಮ ಫಲಿತಾಂಶ ಪಡೆಯಬಹುದು. ಒಂದು ವೇಳೆ ನೀವು ಬೃಹತ್ ಮೊತ್ತದ ಸಾಲಗಾರರಾಗಿದ್ದರೆ ನಿವೃತ್ತಿಯೊಳಗೆ ಹೇಗೆ ಸಾಲಮುಕ್ತಗೊಳ್ಳಬಹುದು ಎಂಬ ಬಗ್ಗೆ ಗುರಿ ಹಾಕಿಕೊಳ್ಳಬೇಕಾಗುತ್ತದೆ. 45 ವರ್ಷದೊಳಗೆ ಎಲ್ಲಾ ಸಾಲವನ್ನು ಮುಕ್ತಗೊಳಿಸಬೇಕಾಗುತ್ತದೆ.
ಬ್ಯಾಂಕ್ ಗೆ ಸಾಲ ಕಟ್ಟುವ ಬದಲು ನಿವೃತ್ತಿ ನಿಧಿಯನ್ನು ಹೆಚ್ಚಿಸಲು ಸಾಕಷ್ಟು ಸಮಯವನ್ನು ಇದು ನೀಡುತ್ತದೆ. ತುರ್ತು ಸಂದರ್ಭಕ್ಕಾಗಿ ಉಳಿತಾಯ ಅಥವಾ ಮನೆ ಮತ್ತಿತರ ಆಸ್ತಿಯ ಮೇಲೆ ಕನಿಷ್ಠ ಶೇ.20 ರಷ್ಟು ಡೌನ್ ಪೇಮೆಂಟ್ ಮಾಡಿದ್ದರೆ, ತಮ್ಮ ಇಟ್ಟಿಕೊಂಡಿದ್ದ ಗುರಿಗಳನ್ನು ಮುಂಚಿತವಾಗಿಯೇ ಸಾಧಿಸಬಹುದಾಗಿದೆ. ಸಾಲ ಮಾಡಬೇಕಾದ ಅನೀವಾರ್ಯತೆ ಇರುವುದಿಲ್ಲ.
1.ಉಳಿತಾಯ ಕಾರ್ಯತಂತ್ರ : ಒಬ್ಬ ವ್ಯಕ್ತಿ ಕನಿಷ್ಠ 85 ವರ್ಷ ಬದುಕುತ್ತಾನೆ ಎಂಬ ನಿರೀಕ್ಷೆ ಇಟ್ಟುಕೊಳೋಣ, ಉದಾಹರಣೆಗೆ 25 ರಿಂದ 65 ವರ್ಷದೊಳಗೆ ನೀವು 500 ರೂಪಾಯಿಯನ್ನು ನಿವೃತ್ತಿ ನಿಧಿಯಾಗಿಯೇ ಮೀಸಲಿಡಬೇಕಾಗುತ್ತದೆ. ನಿವೃತ್ತಿ ನಿಧಿಗಾಗಿ ಕನಿಷ್ಠ 250 ತಿಂಗಳ ಪಾವತಿಸಬೇಕಾಗುತ್ತದೆ.
ಯಾವುದೇ ಯಶಸ್ವಿ ಉಳಿತಾಯ ಮಾಡಲು ಸಾಲ ಮರುಪಾವತಿ ಯೋಜನೆ ಪ್ರಮುಖವಾಗಿರುತ್ತದೆ. ಇದರಿಂದಾಗಿ ಸಾಲ ಮುಕ್ತಗೊಂಡು ನಮ್ಮ ಹಣದ ಸ್ಥಿತಿಯನ್ನು ಬದಲಾಯಿಸುತ್ತದೆ.
ಪ್ರತಿ ತಿಂಗಳು ಕನಿಷ್ಠ ಪಾವತಿ ಮಾಡಿ
ದುಬಾರಿ ಪ್ರಮಾಣದ ಬಡ್ಡಿ ಹಾಗೂ ಶುಲ್ಕವನ್ನು ಕಡಿಮೆಗೊಳಿಸಲು ಪಡೆದಿರುವ ಸಾಲಕ್ಕೆ ಪ್ರತಿತಿಂಗಳು ಕನಿಷ್ಠ ಪಾವತಿ ಮಾಡುವುದನ್ನು ಕಲಿಯಬೇಕು. ಕ್ರೇಡಿಟ್ ಕಾರ್ಡ್ ಮೂಲಕ ಪಾವತಿಯೂ ಸಾಲದಿಂದ ಮುಕ್ತಗೊಳ್ಳಲು ಒಂದು ಉತ್ತಮವಾದ ಮಾರ್ಗವಾಗಿದೆ. ಕೊನೆಯ ದಿನಾಂಕದಲ್ಲಿ ಪಾವತಿಸಿದ್ದರೆ ಅದು ಮುಂದಿನ ತಿಂಗಳ ಬಿಲ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಯಾವುದೇ ವ್ಯವಹಾರ ಮುಂದಿನ ತಿಂಗಳ ಹೇಳಿಕೆಯಲ್ಲಿ ಸೇರಿಕೊಳ್ಳುತ್ತದೆ. ಇದರಿಂದಾಗಿ ಕ್ರೇಡಿಟ್ ಕಾರ್ಡ್ ಮೇಲಿನ ಬಡ್ಡಿ ಮೇಲಿನ ದರ ಕಡಿತಗೊಳ್ಳಿಸುತ್ತದೆ.
ಕಿರು ಅವಧಿಯ ಸಾಲದಿಂದ ದೂರ ಇರಿ
ಕಿರು ಅವಧಿಯ ಸಾಲದಿಂದ ನಿವೃತ್ತಿ ಯೋಜನೆ ಹಳಿತಪ್ಪುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಪಾವತಿಯೂ ಮುಖ್ಯವಾಗಿದೆ. ಕಿರು ಅವಧಿಯ ಸಾಲದ ಬಗ್ಗೆ ಪಟ್ಟಿ ಮಾಡಿ, ಕೊನೆಯ ಸಾಲ ಪಾವತಿ ಹಾಗೂ ದಿನಾಂಕವನ್ನು ಲೆಕ್ಕ ಹಾಕಬೇಕು.
ನಿವೃತ್ತಿಯೊಳಗೆ ಬಡ್ಡಿ ಪಾವತಿಸುವುದಿಲ್ಲ ಎನ್ನುವರು ಹೀಗೆ ಸಾಲಮರುಪಾವತಿ ಕ್ರಮ ಅನುಸರಿಸುವುದರಿಂದ ಅವರ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ಕಾಣಬಹುದಾಗಿದೆ. ಇದು ಅತ್ಯಂತ ಅವಶ್ಯಕವಾಗಿದ್ದು, ಈ ಅವಧಿಯಲ್ಲಿ ಯಾವುದೇ ರೀತಿಯ ಸಾಲ ಮಾಡಬಾರದು.