ವಾಣಿಜ್ಯ

ಬ್ಯಾಂಕ್ ನೌಕರರಿಂದ ಜುಲೈ, ಆಗಸ್ಟ್ ನಲ್ಲಿ ಮತ್ತೆ ಮುಷ್ಕರದ ಬೆದರಿಕೆ

Lingaraj Badiger
ಚೆನ್ನೈ:  ಕೇವಲ ಶೇ.2ರಷ್ಟು ವೇತನ ಹೆಚ್ಚಳ ಖಂಡಿಸಿ ಮತ್ತೆ ಜುಲೈ ಮತ್ತು ಆಗಸ್ಟ್ ನಲ್ಲಿ ಮುಷ್ಕರ ನಡೆಸುವುದಾಗಿ ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್‌(ಯುಎಫ್‌ಬಿಯು) ಮಂಗಳವಾರ ಎಚ್ಚರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ನೌಕರರು ವೇತನ ಪರಿಷ್ಕರಣೆಗೆ ಆಗ್ರಹಿಸಿ ಕಳೆದ ಮೇ 30 ಮತ್ತು 31ರಂದು ದೇಶಾದ್ಯಂತ ಬ್ಯಾಂಕ್‌ ಮುಷ್ಕರ ನಡೆಸಿದ್ದರು.
ಒಂಬತ್ತು ಬ್ಯಾಂಕ್ ಸಂಘಟನೆಗಳನ್ನು ಒಳಗೊಂಡ ಯುಎಫ್‌ಬಿಯು ಇಂದು ಸಭೆ ಸೇರಿ, ನೌಕರರ ವೇತನ ಹೆಚ್ಚಳಕ್ಕಾಗಿ ಮತ್ತಷ್ಟು ಮುಷ್ಕರ ನಡೆಸುವ ನಿರ್ಧಾರ ತೆಗೆದುಕೊಂಡಿದೆ.
ಹೆಚ್ಚು ಮುಷ್ಕರ ನಡೆಸುವ ಮೂಲಕ ಸರ್ಕಾರದ ವಿರುದ್ಧ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೆ ಸೌಹಾರ್ದ ಪರಿಹಾರದ ಅಗತ್ಯವನ್ನು ಪರಿಗಣಿಸಿ ಸರ್ಕಾರ ಮತ್ತು ಬ್ಯಾಂಕುಗಳ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಭೆಯ ನಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ಅವರು ಹೇಳಿದ್ದಾರೆ. 
SCROLL FOR NEXT