ಏರ್ ಇಂಡಿಯಾ 
ವಾಣಿಜ್ಯ

ಏರ್ ಇಂಡಿಯಾದಲ್ಲಿ ಪ್ರಯಾಣಿಕರಿಗೆ 'ಮಹಾರಾಜ ದರ್ಜೆ' ಸೀಟುಗಳು, ವಿವಿಧ ಭಕ್ಷ್ಯಗಳು

ಏರ್ ಇಂಡಿಯಾ ವಿಮಾನದ ವಿದೇಶಿ ವಿಮಾನಗಳಲ್ಲಿ ಪ್ರಯಾಣಿಸುವವರು ಇನ್ನು ಮುಂದೆ ಹೊಸ ....

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ವಿದೇಶಗಳಿಗೆ ಪ್ರಯಾಣಿಸುವವರು ಇನ್ನು ಮುಂದೆ ಹೊಸ ಅನುಭವವನ್ನು ಪಡೆಯಬಹುದು.

ಏರ್ ಇಂಡಿಯಾ ಸದ್ಯದಲ್ಲಿಯೇ ಮಹಾರಾಜ ಬ್ಯುಸಿನೆಸ್  ದರ್ಜೆಯ ಸೀಟುಗಳು, ವಿಮಾನದಲ್ಲಿ ಹಲವು ಹೊಸ ಭಕ್ಷ್ಯಗಳು ಮತ್ತು ಸಿಬ್ಬಂದಿಗೆ ಹೊಸ ಸಮವಸ್ತ್ರಗಳನ್ನು ಜಾರಿಗೆ ತರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ವಿಮಾನದಲ್ಲಿನ ವಿನ್ಯಾಸ ಮತ್ತು ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲಿದೆ.

ಹೊಸ ಸೇವೆ ನಾಳೆ ಜಾರಿಗೆ ಬರಲಿದೆ. ನಷ್ಟದಲ್ಲಿರುವ ಏರ್ ಇಂಡಿಯಾದಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಸರ್ಕಾರ ಯೋಜಿಸುತ್ತಿರುವ ಸಂದರ್ಭದಲ್ಲಿ ಈ ಹೊಸ ಸೌಕರ್ಯಗಳನ್ನು ಅಳವಡಿಸಿಕೊಳ್ಳಲು ಮುಂದಾಗಿರುವುದು ಗಮನ ಸೆಳೆದಿದೆ.

ಮಹಾರಾಜ ದರ್ಜೆಯ ಸೀಟುಗಳನ್ನು ಏರ್ ಇಂಡಿಯಾದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.

ಬೋಯಿಂಗ್ 777 ಮತ್ತು 787 ವಿಮಾನಗಳಲ್ಲಿ ಈಗಿರುವ ಬ್ಯುಸಿನೆಸ್ ದರ್ಜೆಯ ಸೀಟುಗಳನ್ನು ಪರಿಷ್ಕರಿಸಿ ಮಹಾರಾಜ ಬ್ಯುಸಿನೆಸ್ ದರ್ಜೆಯ ಸೀಟುಗಳನ್ನಾಗಿ ಬದಲಾಯಿಸಲಾಗುವುದು. ಸಣ್ಣ ಮತ್ತು ದೀರ್ಘಾವಧಿಯ ಅಂತಾರಾಷ್ಟ್ರೀಯ ವಾಯುಮಾರ್ಗಗಳಲ್ಲಿ ಈ ವಿಮಾನಗಳು ಹಾರಾಟ ನಡೆಸಲಿವೆ.

ಪ್ರಸ್ತುತ ಏರ್ ಇಂಡಿಯಾ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಶೇಕಡಾ 17ರಷ್ಟು ಮಾರುಕಟ್ಟೆ ಷೇರುಗಳನ್ನು ಒಳಗೊಂಡಿದೆ. ಪ್ರತಿ ವಾರಕ್ಕೆ 2,500 ಅಂತಾರಾಷ್ಟ್ರೀಯ ಸ್ಲಾಟ್ ಗಳನ್ನು ಹೊಂದಿದ್ದು 43 ವಿದೇಶಿ ಸ್ಥಳಗಳಿಗೆ ಸಂಚರಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ