ಸಂಗ್ರಹ ಚಿತ್ರ 
ವಾಣಿಜ್ಯ

ಕೃಷಿ ಉತ್ಪನ್ನ, ಉಕ್ಕಿನ ಮೇಲಿನ ಆಮದು ಸುಂಕ ಏರಿಕೆ: ಅಮೆರಿಕಕ್ಕೆ ತಿರುಗೇಟು ನೀಡಿದ ಭಾರತ

ಆಮದು ಸುಂಕ ಏರಿಕೆ ಮಾಡಿ ಇತರೆ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅಮೆರಿಕಕ್ಕೆ ಭಾರತ ಕೂಡ ಬಿಸಿ ಮುಟ್ಟಿಸಿದ್ದು, ಕೃಷಿ ಉತ್ಪನ್ನ ಮತ್ತು ಉಕ್ಕಿನ ಮೇಲಿನ ಆಮದು ಸುಂಕ ಏರಿಕೆ ಮಾಡಿದೆ.

ನವದೆಹಲಿ: ಆಮದು ಸುಂಕ ಏರಿಕೆ ಮಾಡಿ ಇತರೆ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅಮೆರಿಕಕ್ಕೆ ಭಾರತ ಕೂಡ ಬಿಸಿ ಮುಟ್ಟಿಸಿದ್ದು, ಕೃಷಿ ಉತ್ಪನ್ನ ಮತ್ತು ಉಕ್ಕಿನ ಮೇಲಿನ ಆಮದು ಸುಂಕ ಏರಿಕೆ ಮಾಡಿದೆ.
ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉಕ್ಕು ಮತ್ತು ಅಲ್ಯುಮಿನಿಯಂ ಮೇಲಿನ ಅಮದು ಸುಂಕ ಏರಿಕೆ ಮಾಡಿದ್ದರು. ಇದಕ್ಕೆ ಐರೋಪ್ಯ ಒಕ್ಕೂಟ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತೀಕಾರದ ಕ್ರಮವಾಗಿ ಐರೋಪ್ಯ ಒಕ್ಕೂಟ ಮತ್ತು ಚೀನಾ ತಮ್ಮ ಆಮದು ಸುಂಕ ಏರಿಕೆ ಮಾಡಿದ್ದವು. ಇದೀಗ ಈ ಪಟ್ಟಿಗೆ ಭಾರತ ಕೂಡ ಸೇರಿಕೊಂಡಿದ್ದು, ಭಾರತ ಕೆಲವು ಕೃಷಿ ಉತ್ಪನ್ನಗಳು, ಉಕ್ಕು ಮತ್ತು ಕಬ್ಬಿಣ ಆಮದು ಸುಂಕವನ್ನುಏರಿಕೆ ಮಾಡಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದ್ದು, ಭಾರತದ ವಾಣಿಜ್ಯ ಸಚಿವಾಲಯ ಹೊರಡಿಸುವ ಸುಂಕ ದರ ಪಟ್ಟಿಯಲ್ಲಿ ಆ್ಯಪಲ್‌, ಆಲ್ಮಂಡ್‌ (ಬಾದಾಮಿ), ಚಿಕ್‌ ಪೀಸ್‌, ಲೆಂಟಿಲ್‌, ವಾಲ್‌ ನಟ್‌, ಆರ್ಟೆಮಿಯಾ ಇತ್ಯಾದಿ ಉತ್ಪನ್ನಗಳನ್ನು ಹೆಸರಿಸಿ ಅವುಗಳ ಮೇಲಿನ ಆಮದು ತೆರಿಗೆಯನ್ನು ಹೆಚ್ಚಿಸಿದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಂತೆಯೇ  ಭಾರತ ಕೆಲವೊಂದು ವರ್ಗಗಳ ಕಬ್ಬಿಣ ಮತ್ತು ಉಕ್ಕು ಉತ್ಪನ್ನಗಳ ಮೇಲಿನ ಸುಂಕವನ್ನು ಕೂಡ ಏರಿಕೆ ಮಾಡಿದೆ. 
ಅಮೆರಿಕದ ಉಕ್ಕು ಮತ್ತು ಅಲ್ಯುಮಿನಿಯಂ ಸುಂಕ ಏರಿಕೆಯಿಂದ ವಿನಾಯಿತಿ ಪಡೆಯುವಲ್ಲಿ ವಿಫ‌ಲವಾದ ಬಳಿಕ ಭಾರತ ವಿಶ್ವ ವಾಣಿಜ್ಯ ಸಂಘಟನೆಯಲ್ಲಿ ತನ್ನ ದೂರನ್ನು ದಾಖಲಿಸಿತ್ತು. ಅಲ್ಲದೆ ಭಾರತ ಡಬ್ಲ್ಯುಟಿಓ ಗೆ ಉತ್ಪನ್ನಗಳ ಒಂದು ಪಟ್ಟಿಯನ್ನು ಸಲ್ಲಿಸಿ ಅವುಗಳ ಮೇಲೆ ತಾನು ಹೆಚ್ಚಿನ ಸಂಕ ಭರಿಸಬೇಕಾಗುತ್ತದೆ ಎಂದು ಹೇಳಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ