ಸಾಂದರ್ಭಿಕ ಚಿತ್ರ 
ವಾಣಿಜ್ಯ

ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ.4.44ಕ್ಕೆಇಳಿಕೆ

ಆರ್ಥಿಕ ಮಾರುಕಟ್ಟೆಯಲ್ಲಿ ಚಿಲ್ಲರೆ ಹಣದುಬ್ಬರ ದರ ಸತತ ಎರಡನೇ ತಿಂಗಳು ಕೂಡ ಕಡಿಮೆಯಾಗಿದ್ದು ...

ನವದೆಹಲಿ: ಆರ್ಥಿಕ ಮಾರುಕಟ್ಟೆಯಲ್ಲಿ ಚಿಲ್ಲರೆ ಹಣದುಬ್ಬರ ದರ ಸತತ ಎರಡನೇ ತಿಂಗಳು ಕೂಡ ಕಡಿಮೆಯಾಗಿದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಧ್ಯಂತರ ಅವಧಿಯ ಗುರಿಗಿಂತ ಶೇಕಡಾ4ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಳಿದಿದೆ. ಮುಂದಿನ ಏಪ್ರಿಲ್ ತಿಂಗಳ ಹೊತ್ತಿಗೆ ಹಣದುಬ್ಬರ ಸ್ಥಿರವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಕಳೆದ ಆಗಸ್ಟ್ ನಲ್ಲಿ 25 ಮೂಲ ಪಾಯಿಂಟ್ ಗಳನ್ನು ಸ್ಥಿರವಾಗಿ ಉಳಿಸಿಕೊಂಡ ನಂತರ ರಿಸರ್ವ್ ಬ್ಯಾಂಕ್ ಮುಂದಿನ ತಿಂಗಳು ಇದೇ ದರವನ್ನು ನಿಗದಿಪಡಿಸುವ ಸಾಧ್ಯತೆಯಿದೆ.
ಗ್ರಾಹಕ ವಸ್ತುಗಳ ಬೆಲೆ ಹಣದುಬ್ಬರ ಪಟ್ಟಿ ಬಿಡುಗಡೆಯಾಗಿದ್ದು, ಫೆಬ್ರವರಿ ತಿಂಗಳಲ್ಲಿ ಶೇಕಡಾ 4.44ರಷ್ಟು ಚಿಲ್ಲರೆ ಹಣದುಬ್ಬರವಾಗಿದೆ ಎಂದು ಅಂಕಿಅಂಶಗಳ ಸಚಿವಾಲಯ ತಿಳಿಸಿದೆ.

ಕಳೆದ ಜನವರಿಯಲ್ಲಿ ವಾರ್ಷಿಕ ಗ್ರಾಹಕ ವಸ್ತುಗಳ ಹಣದುಬ್ಬರ ಶೇಕಡಾ 5.1ರಷ್ಟಿದ್ದು, ಡಿಸೆಂಬರ್ ನಲ್ಲಿ ಶೇಕಡಾ 5.2ರಷ್ಟಾಗಿತ್ತು ಅದು ಕಳೆದ 17 ತಿಂಗಳುಗಳಲ್ಲಿ ಅಧಿಕ ದರವಾಗಿತ್ತು ಎಂದು ಅಂಕಿಅಂಶ ತಿಳಿಸಿದೆ.

ರಾಯ್ಟರ್ಸ್ ನಡೆಸಿದ ಮತಸಮೀಕ್ಷೆಯಲ್ಲಿ ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ ಜನವರಿಯಲ್ಲಿ ಶೇಕಡಾ 5.1ಕ್ಕಿಂತ 4.8ರಲ್ಲಿ ನಿಗದಿಯಾಗಬಹುದು ಎಂದು ಅಂದಾಜಿಸಲಾಗಿತ್ತು. ಮುನ್ಸೂಚನೆ ಶೇಕಡಾ 4.4ರಿಂದ ಶೇಕಡಾ 5.6ರಷ್ಟಿತ್ತು.

ಕಳೆದ ತಿಂಗಳು ಗ್ರಾಹಕರ ಆಹಾರ ಬೆಲೆ ಶೇಕಡಾ 3.26ರಷ್ಟು ಹೆಚ್ಚಾಗಿದೆ. ಅದು ಜನವರಿಯಲ್ಲಿ ಶೇಕಡಾ 4.70ರಷ್ಟಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಧಾನ್ಯಗಳ ಬೆಲೆ ಶೇಕಡಾ 17ಕ್ಕಿಂತ ಹೆಚ್ಚು ಇಳಿಕೆಯಾಗಿದೆ.

ಇಂಧನ ಮತ್ತು ಬೆಳಕಿನ ಹಣದುಬ್ಬರ ಶೇಕಡಾ 6.8ರಲ್ಲಿ ನಿಂತಿದ್ದು, ಜನವರಿಯಲ್ಲಿ ಶೇಕಡಾ 7.58ರಲ್ಲಿತ್ತು. ವಸತಿ ಹಣದುಬ್ಬರ ಶೇಕಡಾ 8.28ರಲ್ಲಿದೆ. ಕಳೆದ ಜನವರಿಯಲ್ಲಿ ಅದು ಶೇಕಡಾ 8.33ರಲ್ಲಿತ್ತು.

ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟುಕೊಂಡು ಆರ್ಥಿಕ ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿ ಒತ್ತು ನೀಡುತ್ತಿದ್ದಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT