ವಾಣಿಜ್ಯ

ವಿಮಾನಯಾನ ಸಂಸ್ಥೆ ನಷ್ಟ ಭರ್ತಿಗೆ ಕ್ರಮ, ಏರ್ ಇಂಡಿಯಾದ ಶೇ.76 ಪಾಲು ಮಾರಾಟಕ್ಕೆ ಸರ್ಕಾರ ಸಿದ್ದತೆ

Raghavendra Adiga
ನವದೆಹಲಿ: ಸರ್ಕಾರಿ ಸ್ವಾಮ್ಯದ ವಾಯುಯಾನ ಸಂಸ್ಥೆ ಏರ್ ಇಂಡಿಯಾದ ಶೇ.76ರಷ್ಟು ಪಾಲನ್ನು  ಮಾರಾಟ ಮಾಡಲು ಸರ್ಕಾರ ಯೋಜಿಸಿದೆ. ಇಂದು ಬಿಡುಗಡೆಯಾದ ರಾಷ್ಟ್ರೀಯ ವಿಮಾನಯಾನ ಕಾರ್ಯತಂತ್ರ ಕುರಿತ ಪ್ರಾಥಮಿಕ ಮಾಹಿತಿಯಲ್ಲಿ ಈ ವಿಚಾರ ಬಹಿರಂಗಪಡಿಸಲಾಗಿದೆ.
ನಷ್ಟ್ದಲ್ಲಿರುವ ವಿಮಾನಯಾನ ಸಂಸ್ಥೆ ಹಾಗೂ ಅದರ ಎರಡು ಅಂಗಸಂಸ್ಥೆಗಳ ಪಾಲನ್ನು ಮಾರಾಟ ಮಾಡಲು ಸರ್ಕಾರ ಆಸಕ್ತಿ ತಾಳಿದೆ. ಸರ್ಕಾರಿ ಸಂಸ್ಥೆಯ 76 ಶೇಕಡ ಇಕ್ವಿಟಿ ಷೇರು ಬಂಡವಾಳವನ್ನು ಮಾರಾಟ ಮಾಡಲು ಹಾಗೂ ಸಂಸ್ಥೆಯ ನಿರ್ವಹಣೆ ಮೇಲಿನ ನಿಯಂತ್ರಣವನ್ನು ವರ್ಗಾಯಿಸಲು ಸರ್ಕಾರವು ಯೋಜಿಸಿದೆ. ಎಂದು ಮಾಹಿತಿ ಬಂದಿದೆ.
ಸಂಸ್ಥೆಯ ಆಡಳಿತ ಮತ್ತು ಉದ್ಯೋಗಿಗಳು  ನೇರವಾಗಿ ಅಥವಾ ಒಕ್ಕೂಟ ರಚನೆ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಈ ಕಾರ್ಯತಂತ್ರದ ಹೂಡಿಕೆಯ ಪ್ರಕ್ರಿಯೆಗೆ ವ್ಯವಹಾರ ಸಲಹೆಗಾರರಾಗಿ  ಆರ್ನೆಸ್ಟ್ ಅಂಡ್ ಯಂಗ್,  ಎಲ್ ಎಲ್ ಪಿ ಇಂಡಿಯಾಗಳನ್ನು ನೇಮಕ ಮಾಡಲಾಗಿದೆ. ಏರ್ ಇಂಡಿಯಾದ ಕಡಿಮೆ ವೆಚ್ಚದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾಗೂ ಏರ್ ಇಂಡಿಯಾ ಎಸ್ಎಟಿಎಸ್ ಏರ್ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್  ಸಂಸ್ಥೆಗಳು ಈ ವ್ಯವಹಾರದಲ್ಲಿ ಭಾಗವಹಿಸಲಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ಹೇಳಿದೆ.
ಏರ್ ಇಂಡಿಯಾ 50 ಸಾವಿರ ಕೋಟಿ ರೂ. ಸಾಲದ ಹೊರೆ ಹೊಂದಿದ್ದು ವಿಮಾನಯಾನ ಸಂಸ್ಥೆ ನಷ್ಟದಲ್ಲಿದೆ ಎಂದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಜೂನ್ 201ರಲ್ಲಿ ಒಪ್ಪಿಕೊಂಡಿತ್ತು.ಈ ಒಪ್ಪಿಗೆಯ ಬಳಿಕ ಹಣಕಾಸು ಸಚಿವ ಅರುಣ್ ಜೇಟ್ಲಿಯ ನೇತೃತ್ವದಲ್ಲಿ ಏರ್ ಇಂಡಿಯಾ ನಿರ್ದಿಷ್ಟ ಪರ್ಯಾಯ ಯಾಂತ್ರಿಕ ವ್ಯವಸ್ಥೆ (ಎಐಎಸ್ಎಎಂ) ಅನ್ನು ಸ್ಥಾಪಿಸಲಾಯಿತು.
ಹಿಂದಿನ ಯುಪಿಎ ಸರ್ಕಾರವು 2012 ರಲ್ಲಿ ಅಂಗೀಕರಿಸಿದ್ದ ತೆರಿಗೆ ಉಳಿತಾಯ ಯೋಜನೆಯಡಿಯಲ್ಲಿ ಏರ್ ಇಂಡಿಯಾ ತನ್ನ ತೆರಿಗೆ ಆದಾಯವನ್ನು ಉಳಿಕೆ ಮಾಡಿತ್ತು.
SCROLL FOR NEXT