ನವದೆಹಲಿ:ಹೂಡಿಕೆಗೆ ಸಂಬಂಧಿಸಿದಂತೆ ಹೆಲ್ಡ್ ಟು ಮೆಚ್ಯುರಿಟಿ(ಹೆಚ್ ಟಿಎಂ) ಮಾರ್ಗಸೂಚಿಗಳನ್ನು ಅನುಸರಿಸದ ಐಸಿಐಸಿಐ ಬ್ಯಾಂಕ್ ಗೆ ಭಾರತೀಯ ರಿಸರ್ವ್ ಬ್ಯಾಂಕ್ 9 ಮಿಲಿಯನ್ ಡಾಲರ್ ದಂಡ ವಿಧಿಸಿದೆ.
ಹೆಚ್ ಟಿಎಂ ವಿಭಾಗದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸದೇ ಇರುವ ಹಿನ್ನೆಲೆಯಲ್ಲಿ ಆರ್ ಬಿಐ ಐಸಿಐಸಿಐ ಬ್ಯಾಂಕ್ ಗೆ ದಂಡ ವಿಧಿಸಿದೆ. ಐಸಿಐಸಿಐ ಬ್ಯಾಂಕ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವುದರ ಬಗ್ಗೆ ಈ ವರೆಗೂ ಆರ್ ಬಿಐ ವಿವರಣೆ ನೀಡಿಲ್ಲ.