ವಾಣಿಜ್ಯ

ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್ ವಂಚನೆಯ ಒಟ್ಟು ಮೊತ್ತ 18,170 ಕೋಟಿ ರು.!

Lingaraj Badiger
ಮುಂಬೈ: 2016-17ನೇ ಸಾಲಿನ ಹಣಕಾಸು ವರ್ಷದಲ್ಲಿ ವಿವಿಧ ದೇಶಿಯ ಬ್ಯಾಂಕ್ ಗಳಿಗೆ ಒಟ್ಟು 18,170 ಕೋಟಿ ರುಪಾಯಿ ವಂಚಿಸಲಾಗಿದ್ದು, ಈ ಸಂಬಂಧ ಒಟ್ಟು12,553 ಬ್ಯಾಂಕ್ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷ ಅತಿ ಹೆಚ್ಚು ವಂಚನೆಗೆ ಒಳಗಾದ ಬ್ಯಾಂಕ್ ಗಳ ಪೈಕಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಒಟ್ಟು 3,893 ವಂಚನೆ ಪ್ರಕರಣಗಳನ್ನು ದಾಖಲಿಸಿದೆ. 3,359 ಪ್ರಕರಣಗಳನ್ನು ದಾಖಲಿಸಿರುವ ಐಸಿಐಸಿಐ ಬ್ಯಾಂಕ್ ಎರಡನೇ ಸ್ಥಾನದಲ್ಲಿದೆ. 2,319 ಪ್ರಕರಣಗಳೊಂದಿಗೆ ಎಚ್ ಡಿಎಫ್ ಸಿ ಬ್ಯಾಂಕ್ ಮೂರನೇ ಸ್ಥಾನದಲ್ಲಿದೆ.
ಇನ್ನು ವಂಚನೆಯ ಮೊತ್ತದ ವಿಚಾರಕ್ಕೆ ಬಂದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಮೊದಲ ಸ್ಥಾನದಲ್ಲಿದ್ದು, ಕಳೆದ ವರ್ಷ ಒಟ್ಟು 2,810 ಕೋಟಿ ರುಪಾಯಿ ವಂಚಿಸಲಾಗಿದೆ. 2,770 ಕೋಟಿ ರುಪಾಯಿ ವಂಚನೆಗೊಳಗಾಗಿರುವ ಬ್ಯಾಂಕ್ ಆಫ್ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,420 ಕೋಟಿ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ 2,041 ಕೋಟಿ ರುಪಾಯಿ ವಂಚನೆಗೊಳಗಾಗಿವೆ.
2016-2017ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ 18,170 ಕೋಟಿ ರುಪಾಯಿ ಮೌಲ್ಯದ ಒಟ್ಟು12,553 ಪ್ರಕರಣಗಳು ದಾಖಲಾಗಿವೆ ಎಂದು IiAS ವರದಿ ತಿಳಿಸಿದೆ.
ಉದ್ಯಮಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪಿಎನ್ ಬಿ ಬ್ಯಾಂಕ್ 13 ಸಾವಿರ ಕೋಟಿ ರುಪಾಯಿ ವಂಚಿಸಿದ ಪ್ರಕರಣದ ನಂತರ ಹಲವು ಬ್ಯಾಂಕ್ ವಂಚನೆ ಪ್ರಕರಣಗಳು ಬಯಲಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ವರದಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
SCROLL FOR NEXT