ವಾಣಿಜ್ಯ

ಗೋಧಿ ಮೇಲಿನ ಆಮದು ಸುಂಕ ಶೇ. 30 ರಷ್ಟು ಹೆಚ್ಚಳ

Nagaraja AB
ನವದೆಹಲಿ :  ದೇಶಿಯ ಬೆಳೆಗಾರರನ್ನು ರಕ್ಷಿಸಲು ಹಾಗೂ ಕಡಿಮೆ ಗುಣಮಟ್ಟದ  ಆಮದು ನಿಯಂತ್ರಿಸಲು  ಗೋಧಿ ಮೇಲಿನ ಆಮದು ಸುಂಕವನ್ನು ಸರ್ಕಾರ ಶೇ. 20 ರಿಂದ ಶೇ. 30ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.
2017-18 ರಲ್ಲಿ ಗೋಧಿ ಬೆಳೆಯನ್ನು ರೈತರು ಕೊಯ್ಲು ಮಾಡಿದ್ದು, ಸರ್ಕಾರ 33.3 ಮಿಲಿಯನ್ ಟನ್ ನಷ್ಟು ಸಂಗ್ರಹಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬೆಳೆ ವರ್ಷದಲ್ಲಿ ಸರ್ಕಾರ ಅತ್ಯುತ್ತಮ ಗುಣಮಟ್ಟದ ಗೋಧಿ ಸಂಗ್ರಹಿಸಲು ಮುಂದಾಗಿದ್ದು, ಪ್ರತಿ ಕ್ವಿಂಟಾಲ್ ಗೆ 1.900 ರೂ. ನಂತೆ ಪ್ಲೋರ್ ಮಿಲ್ಸ್ ನಿಂದಲೇ ಸರ್ಕಾರ ಗೋಧಿ ಸಂಗ್ರಹಿಸುತ್ತಿದೆ. ಒಂದು ವೇಳೆ ಸರ್ಕಾರ ಸೇವಾ ಸುಂಕವನ್ನು ಹೆಚ್ಚಿಸದಿದ್ದರೆ,  ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ ಎಂದು ಪ್ಲೋರ್ ಮಿಲ್ಲರ್ಸ್ ಹೇಳುತ್ತಾರೆ.
SCROLL FOR NEXT