ಮುಂಬೈ: ಗಗನದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ ಕ್ರಮೇಣ ಇಳಿಕೆಯತ್ತ ಸಾಗಿತ್ತು, ಗುರುವಾರ ಮತ್ತೆ ಪೆಟ್ರೋಲ್ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.
ಇಂದು ಪೆಟ್ರೋಲ್ ದರಲ್ಲಿ 18 ಪೈಸೆಯಷ್ಟು ಇಳಿಕೆಯಾಗಿದ್ದು, ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 79.37 ರೂಗೆ ಇಳಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರದಲ್ಲಿ 16ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 84.86 ರೂಗಳಿಗೆ ಇಳಿಕೆಯಾಗಿದೆ.
ಇನ್ನು ಡೀಸೆಲ್ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.