ವಾಣಿಜ್ಯ

ಆರ್ ಬಿಐ - ಸರ್ಕಾರ ತಿಕ್ಕಾಟ: ನ.9ರಂದು ಪ್ರಧಾನಿ ಭೇಟಿ ಮಾಡಿದ್ದ ಉರ್ಜಿತ್ ಪಟೇಲ್

Lingaraj Badiger
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ​ಬಿಐ) ಮತ್ತು ಕೇಂದ್ರ ಸರ್ಕಾರದ   ನಡುವಿನ ಭಿನ್ನಾಭಿಪ್ರಾಯ ಶಮನಗೊಳಿಸುವ ನಿಟ್ಟಿನಲ್ಲಿ ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಕಳೆದ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿದ್ದ ಉರ್ಜಿತ್ ಪಟೇಲ್ ಅವರು, ಪ್ರಧಾನಿ ಕಚೇರಿಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.
ಕೇಂದ್ರ ಬ್ಯಾಂಕ್ ಹಾಗೂ ಸರ್ಕಾರದ ನಡುವಿನ ಬಿಕ್ಕಟ್ಟಿನ ಕುರಿತು ನವೆಂಬರ್ 9ರಂದು ಉರ್ಜಿತ್ ಪಟೇಲ್ ಅವರು ಪ್ರಧಾನಿ ಮೋದಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಭೇಟಿ ಬಳಿಕ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಾಲ ನೀಡಲು ಆರ್ ಬಿಐ ವಿಶೇಷ ನಿಯಮಗಳನ್ನು ರೂಪಿಸುವ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಹಣಕಾಸೇತರ ಸಂಸ್ಥೆಗಳಿಗೆ ಸುಲಭ ಸಾಲ ನೀಡುವ ಬಗ್ಗೆ ಒಪ್ಪಂದವಾಗಿದೆಯೇ ಎಂಬುದರ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಸುಲಭ ಸಾಲಕ್ಕಾಗಿ ಒತ್ತಾಯಿಸುತ್ತಿರುವ ಕೇಂದ್ರ ಸರ್ಕಾರ ಇತ್ತೀಚಿಗೆ ಸಾರ್ವಜನಿಕ ಹಿತರಕ್ಷಣೆಯ ಕಾರಣ ಮುಂದಿಟ್ಟುಕೊಂಡು, ಆರ್​ಬಿಐಗೆ ಪತ್ರಮುಖೇನ ನಿರ್ದೇಶನಗಳನ್ನು ನೀಡಲೆಂದು ಆರ್​ಬಿಐ ಕಾಯ್ದೆಯ ಪರಿಚ್ಛೇದ 7ನ್ನು ಅಸ್ತ್ರವಾಗಿ ಬಳಸಿಕೊಂಡಿತು. ಇದು ಆರ್ ಬಿಐ-ಸರ್ಕಾರದ ನಡುವಿನ ತಿಕ್ಕಾಟ ತಾರಕಕ್ಕೇರಲು ಕಾರಣವಾಗಿತ್ತು.
SCROLL FOR NEXT