ನವದೆಹಲಿ: ಶೀಘ್ರದಲ್ಲಿಯೇ ದೇಶದಲ್ಲಿ ಮಾರಾಟವಾಗುವ ಚಿನ್ನದ ಆಭರಣಗಳಿಗೆ ಹಾಲ್ ಮಾರ್ಕಿಂಗ್ ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವನ್ ಹೇಳಿದ್ದಾರೆ.
ಚಿನ್ನದ ಆಭರಣಗಳು ಮತ್ತು ನಾಣ್ಯಗಳ ಶುದ್ಧತೆಯನ್ನು ಹಾಲ್ ಮಾರ್ಕಿಂಗ್ ಪ್ರಮಾಣೀಕರಿಸುತ್ತದೆ.ಹಾಲ್ ಮಾರ್ಕಿಂಗ್ ನೀಡುವ ಭಾರತೀಯ ಮಾನಕ ಸಂಸ್ಥೆ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.
ಬಿಐಎಸ್ ಮೂರು ವಿಧದಲ್ಲಿ ಚಿನ್ನಾಭರಣಗಳಿಗೆ ಹಾಲ್ ಮಾರ್ಕಿಂಗ್ ನೀಡುತ್ತದೆ. 22 ಕ್ಯಾರೆಟ್, 18 ಕ್ಯಾರೆಟ್ ಹಾಗೂ 14 ಕ್ಯಾರೆಟ್ ಚಿನ್ನಾಭರಣಗಳಿಗೆ ಮಾತ್ರ ಹಾಲ್ ಮಾರ್ಕಿಂಗ್ ನೀಡಲಾಗುತ್ತದೆ.