ಸಂಗ್ರಹ ಚಿತ್ರ 
ವಾಣಿಜ್ಯ

ನ.30ರೊಳಗೆ ನೀವು ಈ ಕೆಲಸ ಮಾಡದಿದ್ದರೆ ನಿಮ್ಮ ಎಸ್ ಬಿಐ ನೆಟ್ ಬ್ಯಾಂಕಿಂಗ್ ಸೇವೆ ಕಟ್!

ನೀವು ಭಾರತೀಯ ಸ್ಟೇಟ್ ಬ್ಯಾಂಕ್ ನ ಗ್ರಾಹಕರೇ... ಹಾಗಾದರೆ ನವೆಂಬರ್ 30ರೊಳಗೆ ಈ ಕಾರ್ಯ ಮಾಡಿ.. ಇಲ್ಲವಾದಲ್ಲಿ ನಿಮ್ಮ ಎಸ್ ಬಿಐ ನೆಟ್ ಬ್ಯಾಂಕಿಂಗ್ ಸೇವೆ ಕಡಿತವಾಗಲಿದೆ.

ನವದೆಹಲಿ: ನೀವು ಭಾರತೀಯ ಸ್ಟೇಟ್ ಬ್ಯಾಂಕ್ ನ ಗ್ರಾಹಕರೇ... ಹಾಗಾದರೆ ನವೆಂಬರ್ 30ರೊಳಗೆ ಈ ಕಾರ್ಯ ಮಾಡಿ.. ಇಲ್ಲವಾದಲ್ಲಿ ನಿಮ್ಮ ಎಸ್ ಬಿಐ ನೆಟ್ ಬ್ಯಾಂಕಿಂಗ್ ಸೇವೆ ಕಡಿತವಾಗಲಿದೆ.
ಹೌದು.. ನೀವು ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿದ್ದು, ಅದನ್ನು ಕಳೆದುಕೊಳ್ಳಲು ಬಯಸುತ್ತಿಲ್ಲವಾದರೆ ನವೆಂಬರ್ 30ಕ್ಕೆ ಮುನ್ನ ನಿಮ್ಮ ಸಮೀಪದ ಎಸ್ ಬಿಐ ಶಾಖೆಗೆ ಧಾವಿಸಿ. ಖಾತೆಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯ ನೊಂದಾವಣಿಯಾಗಿದೆಯೇ ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. ನೊಂದಾವಣಿಯಾಗಿರದೇ ಇದ್ದರೆ ಮೊದಲು ಮೊಬೈಲ್ ಸಂಖ್ಯೆ ನೊಂದಾಯಿಸಿ.
ತಮ್ಮ ಬ್ಯಾಂಕ್ ಖಾತೆಗಳೊಂದಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿರದ ಗ್ರಾಹಕರ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಡಿಸೆಂಬರ್ 1ರಿಂದ ಸ್ಥಗಿತಗೊಳಿಸುವುದಾಗಿ ಎಸ್ ಬಿಐ ತನ್ನ ವೆವ್ ಸೈಟ್ ನಲ್ಲಿ ಪ್ರಕಟಿಸಿದೆ. ಆದರೆ ಮೊಬೈಲ್ ಸಂಖ್ಯೆ ನೊಂದಾಯಿಸಿದ ಮಾತ್ರಕ್ಕೆ ಖಾತೆ ಸ್ಥಗಿತಗೊಳ್ಳುತ್ತದೆ ಎಂಬ ಆತಂಕ ಬೇಡ. ಬ್ಯಾಂಕ್ ಖಾತೆಯು ಮುಂದುವರಿಯುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಮಾತ್ರ ನಿಲ್ಲಿಸಲಾಗುತ್ತದೆ.
ಹಳೆಯ ಮ್ಯಾಗ್ನೆಟಿಕ್ ಸ್ಟ್ರಿಪ್ ಡೆಬಿಟ್ ಕಾರ್ಡ್ ಬದಲಾವಣೆ
ಇದೇ ವೇಳೆ ಹಳೆಯ ಮ್ಯಾಗ್ನೆಟಿಕ್ ಸ್ಟ್ರಿಪ್ ನ ಡೆಬಿಟ್ ಕಾರ್ಡ್ ಗಳಿಂದ ವೈಯಕ್ತಿಕ ಮಾಹಿತಿ ಮತ್ತು ಕಾರ್ಡ್ ವಿವರಗಳನ್ನು ಕದಿಯುವುದು ವಂಚಕರಿಗೆ ಸುಲಭವಾಗಿದೆ ಮತ್ತು ಇವುಗಳನ್ನು ಮೋಸದ ವಹಿವಾಟುಗಳನ್ನು ನಡೆಸಲು ಬಳಸಬಹುದು. ಆದ್ದರಿಂದ ಹಳೆಯ ಡೆಬಿಟ್ ಕಾರ್ಡ್‌ಗಳನ್ನು ಹೊಂದಿರುವವರು ಅವುಗಳನ್ನು ಯಾವುದೇ ಶುಲ್ಕಗಳಿಲ್ಲದೆ ಶಾಖೆಗಳಲ್ಲಿ ಅಥವಾ ಆನ್ ಲೈನ್‌ ಎಸ್ ಬಿಐ ಮೂಲಕ ನೂತನ ಇಎಂವಿ ಚಿಪ್ ಗಳನ್ನು ಹೊಂದಿರುವ ಕಾರ್ಡ್ ಗಳಿಗೆ ಬದಲಿಸಿಕೊಳ್ಳುವಂತೆಯೂ ಎಸ್ ಬಿಐ ತನ್ನ ಗ್ರಾಹಕರಿಗೆ ಸೂಚಿಸಿದೆ.
ಡಿಸೆಂಬರ್ ಅಂತ್ಯದೊಳಗೆ ಹಳೆಯ ಮ್ಯಾಗ್ನೆಟಿಕ್ ಸ್ಟ್ರಿಪ್ ಡೆಬಿಟ್ ಕಾರ್ಡ್ ಗಳನ್ನು ಇಎಂವಿ ಚಿಪ್ ಡೆಬಿಟ್ ಕಾರ್ಡ್ ಗಳಾಗಿ ಮೇಲ್ದರ್ಜೆಗೇರಿಸುವಂತೆ ಆರ್ ಬಿಐ ಇತ್ತೀಚಿಗೆ ಬ್ಯಾಂಕ್ ಗಳು ಮತ್ತು ಗ್ರಾಹಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ಕರ್ನಾಟಕದ ಇತಿಹಾಸದಲ್ಲೇ ಮೊದಲು: ಪ್ರತಿಭಟಿಸುವುದಾದರೆ ಸದನದ ಬಾವಿಗೆ ಬನ್ನಿ; ವಿಪಕ್ಷ ಶಾಸಕರಿಗೆ ಸ್ಪೀಕರ್ ಆಹ್ವಾನ, BJP ಕಿಡಿ!

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ; ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ; Video

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!