ಮುಂಬೈ: ಸತತ ಏಳನೇ ದಿನವೂ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಏರಿಕೆಯಾಗಿದ್ದು, ಗುರುವಾರ ರೂಪಾಯಿ ಮೌಲ್ಯ 35 ಪೈಸೆಯಷ್ಟು ಏರಿಕೆಯಾಗಿದೆ.
ನಿರಂತರವಾಗಿ ಕಚ್ಛಾ ತೈಲ ದರ ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ರೂಪಾಯಿ ಮೌಲ್ಯ ಕೂಡ ಏರಿಕೆಯಾಗಿದೆ. ಗುರುವಾರ ರೂಪಾಯಿ ಮೌಲ್ಯ 35 ಪೈಸೆಯಷ್ಟು ಏರಿಕೆಯಾಗಿದೆ. ಆ ಮೂಲಕ ಪ್ರತೀ ಡಾಲರ್ ಗೆ ರೂಪಾಯಿ ಮೌಲ್ಯ 71.11ರೂಗೆ ಏರಿಕೆಯಾಗಿದೆ.
ಅಂತೆಯೇ ಅಮೆರಿಕ ಷೇರುಮಾರುಕಟ್ಟೆಯಲ್ಲಿನ ನಿರಾಶದಾಯಕ ವಹಿವಾಟು ಕೂಡ ಭಾರತೀಯ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಅಂತಾರಾಷ್ಟ್ರೀಯ ಕಚ್ಛಾತೈಲ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರದಲ್ಲಿ ಶೇ.7ರಷ್ಟು ಕಡಿತ ಕಂಡುಬಂದಿದೆ. ಇದೂ ಕೂಡ ರೂಪಾಯಿ ಮೌಲ್ಯ ಏರಿಕೆಗೆ ಕಾರಣ ಎನ್ನಲಾಗಿದೆ.