ಅರುಣ್ ಜೇಟ್ಲಿ 
ವಾಣಿಜ್ಯ

ಸರ್ಕಾರಕ್ಕೆ ಆರ್ ಬಿಐ ಮೀಸಲಿನ ಅಗತ್ಯವಿಲ್ಲ: ಹಣಕಾಸು ಸಚಿವ ಜೇಟ್ಲಿ

ಸರ್ಕಾರದ ಹಣಕಾಸು ಅಗತ್ಯವನ್ನು ಪೂರೈಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಅಥವಾ ಯಾವುದೇ ಇತರ ಸಂಸ್ಥೆಗಳಿಂದ ಹಣ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನವದೆಹಲಿ: ಸರ್ಕಾರದ ಹಣಕಾಸು ಅಗತ್ಯವನ್ನು ಪೂರೈಸುವ ಸಲುವಾಗಿ  ರಿಸರ್ವ್ ಬ್ಯಾಂಕ್ ಅಥವಾ ಯಾವುದೇ ಇತರ ಸಂಸ್ಥೆಗಳಿಂದ ಹಣ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಅದಾಗ್ಯೂ ಅವರು ರಿಸರ್ವ್ ಬ್ಯಾಂಕ್ ನಿಂದ ನೀಡಲ್ಪಡುವ ಹೆಚ್ಚುವರಿಒ ಹಣವನ್ನು ಪಡೆವ ಮೂಲಕ ಭವಿಷ್ಯದ ಸರ್ಕಾರಗಳು ಬಡತನ ನಿರ್ಮೂಲನೆ ಕಾರ್ಯಕ್ರಮಗಳಿಗಾಗಿ ಅದನ್ನು ಬಳಸಿಕೊಳ್ಳುವಂತೆ ಮಾಡಬಹುದಾಗಿದೆ ಎಂದಿದ್ದಾರೆ.
"ನಮ್ಮ ಹಣಕಾಸಿನ ಕೊರತೆಯನ್ನು ನೀಗಿಸಿಕೊಳ್ಳುವುದಕಾಗಿ ಯಾವುದೇ ಇತರ ಸಂಸ್ಥೆಗಳಿಂದ ನಾವು ಹೆಚ್ಚುವರಿ ಹಣವನ್ನು ಬಯಸುವುದಿಲ್ಲ.ಇದು ಸರ್ಕಾರದ ಉದ್ದೇಶವೂ ಅಲ್ಲ.ಮುಂದಿನ ಆರು ತಿಂಗಳಲ್ಲಿ ನಮಗೆ ಸ್ವಲ್ಪ ಹಣ ಕೊಡಿರೆಂದು ನಾವು ಯಾರಿಗೂ ಕೇಳುವುದಿಲ್ಲ." ಟೈಮ್ಸ್ ನೌ ಟಿವಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಸಚಿವರು ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ದೇಶದ ಹಣಕಾಸಿನ ಕೊರತೆ ಜಿಡಿಪಿ ದರವು 3.3 ಶೇಕಡಕ್ಕೆ ಇಳಿಕೆಯಾಗಲಿದೆ.
ಸರ್ಕಾರವು ಆರ್ ಬಿಐ ಮೀಸಲು ಹಣವನ್ನು ಎದುರು ನೋಡುತ್ತಿದೆ ಎನ್ನುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಜೇಟ್ಲಿ ಜಾಗತಿಕವಾಗಿ  ಕೇಂದ್ರ ಬ್ಯಾಂಕ್  ಬಂಡವಾಳದ ಚೌಕಟ್ಟನ್ನು ಹೊಂದಿದ್ದು ನಿಧಿಗಳನ್ನು ನಿರ್ವಹಿಸಬೇಕಾದ ಹಣವನ್ನು ಅದು ಮಿರ್ಧರಿಸಲಿದೆ.ಮುಂದಿನ ಸರ್ಕಾರಗಳು ಹೆಚ್ಚು ಹಣವನ್ನು ಬಡತನ ನಿರ್ಮೂಲನೆ ಕಾರ್ಯಕ್ಕಾಗಿ ಬಳಸಬೇಕೆಂದ್ಯು ನಾವು ಆಶಿಸುತ್ತೇವೆ ಎಂದಿದ್ದಾರೆ.
ಈ ಮಾಸದ ಪ್ರಾರಂಭದಲ್ಲಿ ಡೆದ ಸಭೆಯಲ್ಲಿ ಕೇಂದ್ರ ಬ್ಯಾಂಕ್ ಮೀಸಲು ನಿಧಿ ಮಟ್ಟವನ್ನು ನಿರ್ಧರಿಸಲು ಆರ್ಥಿಕ ಬಂಡವಾಳ ಚೌಕಟ್ಟನ್ನು ಪರೀಕ್ಷಿಸಲು ಉನ್ನತ ಮಟ್ಟದ ಸಮಿತಿ ಸ್ಥಾಪನೆಗಾಗಿ ನಿರ್ಧರಿಸಿತ್ತು. ಆರ್ ಬಿಐ ರೂ 9.59 ಲಕ್ಷ ಕೋಟಿ ಮೀಸಲು ನಿಧಿ ಹೊಂದಿದೆ ಎಂದು ವರದಿಯಾಗಿದೆ.
ರಿಸರ್ವ್ ಬ್ಯಾಂಕ್ ಸ್ವಾಯತ್ತತೆಗೆ ಸಂಬಂಧಿಸಿದಂತೆ ಪ್ರಶ್ನೆಗಳಿಗೆ ಉತ್ತರಿಸುವ ಜೇಟ್ಲಿ, ಕಾನೂನಿನ ಚೌಕಟ್ಟಿನೊಳಗೆ ಅದನ್ನು ನಿರ್ವಹಿಸಬೇಕು ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT