ವಾಣಿಜ್ಯ

ಎಟಿಎಂ ನಗದು ಡ್ರಾ ಮಿತಿ ಕಡಿತಗೊಳಿಸಲು ಎಸ್​ಬಿಐ ಚಿಂತನೆ

Srinivasamurthy VN
ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಗ್ರಾಹಕರ ಎಟಿಎಂ ಡ್ರಾ ಮಿತಿಯನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ.
ಮೂಲಗಳ ಪ್ರಕಾರ ಎಸ್ ಬಿಐ ದಿನವೊಂದರ ಗ್ರಾಹಕರ ಎಟಿಎಂ ಡ್ರಾ ಮಿತಿಯನ್ನು 40 ಸಾವಿರ ರೂ.ದಿಂದ 20 ಸಾವಿರ ರೂ.ಗೆ ಇಳಿಕೆ ಮಾಡಿದೆ. ಅಲ್ಲದೆ ಈ ನೂತನ ನಿಯಮ ಇದೇ ಅಕ್ಟೋಬರ್ 31ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ಎಟಿಎಂ ವಹಿವಾಟುಗಳಲ್ಲಿನ ವಂಚನೆ ಕುರಿತಾದ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಎಸ್​ಬಿಐ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿಂದೆ ಇದ್ದ ಒಂದು ದಿನದ ಡ್ರಾ ಮಿತಿಯನ್ನು 40,000 ದಿಂದ 20,000ಕ್ಕೆ ಇಳಿಸಲಾಗಿದೆ. ಅಲ್ಲದೆ, ನಗದು ರಹಿತ ವಹಿವಾಟನ್ನು ಉತ್ತೇಜಿಸುವ ಉದ್ದೇಶವನ್ನೂ ಎಸ್ ಬಿಐ ಹೊಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಲ್ಲದೆ ಎಸ್​ಬಿಐ ಅಧೀನದಲ್ಲಿ ಬರುವ ಎಲ್ಲ ಬ್ಯಾಂಕ್​ ಗಳು ಈ ಬಗ್ಗೆ ಗ್ರಾಹಕರಿಗೆ ತಿಳಿಸಲು ಸೂಚನಾ ಫಲಕವನ್ನು ಅಳವಡಿಸುವಂತೆ ಎಸ್ ಬಿಐ ಆಡಳಿತ ಮಂಡಳಿ ಸೂಚಿಸಿದೆ ಎನ್ನಲಾಗಿದೆ.
SCROLL FOR NEXT