ಕೇಂದ್ರ ಸರ್ಕಾರ ನಿರಾಳದ ಬೆನ್ನಲ್ಲೇ ತೈಲ ಕಂಪನಿಗಳಿಂದ ಶಾಕ್: ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ
ತೈಲ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಜನರಿಗೆ ಕೇಂದ್ರ ಸರ್ಕಾರ ನಿರಾಳ ನೀಡಿತ್ತು. ಆದರೆ, ತೈಲ ಕಂಪನಿಗಳು ಮಾತ್ರ ಪ್ರತೀನಿತ್ಯ ಜನರಿಗೆ ಶಾಕ್ ನೀಡುತ್ತಲೇ ಇದ್ದು, ಶನಿವಾರ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್...
ನವದೆಹಲಿ: ತೈಲ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಜನರಿಗೆ ಕೇಂದ್ರ ಸರ್ಕಾರ ನಿರಾಳ ನೀಡಿತ್ತು. ಆದರೆ, ತೈಲ ಕಂಪನಿಗಳು ಮಾತ್ರ ಪ್ರತೀನಿತ್ಯ ಜನರಿಗೆ ಶಾಕ್ ನೀಡುತ್ತಲೇ ಇದ್ದು, ಶನಿವಾರ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಿವೆ.
ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟಲ್ ಪೆಟ್ರೋಲ್ ಬೆಲೆ 0.18 ಪೈಸೆ ಹಾಗೂ ಡೀಸೆಲ್ ಬೆಲೆ 0.29 ಪೈಸೆಯಷ್ಟು ಏರಿಕೆ ಮಾಡಿದೆ. ಇದರಂತೆ ಪೆಟ್ರೋಲ್ ಬೆಲೆ ರೂ.81.68 ಮತ್ತು ಡೀಸೆಲ್ ಬೆಲೆ ರೂ.73.24 ಆಗಿದೆ.
ಮುಂಬೈ ನಲ್ಲಿ ಶುಕ್ರವಾರ ರೂ. 87.15 ಇದ್ದ ಪೆಟ್ರೋಲ್ ಬೆಲೆಯಲ್ಲಿ ಶನಿವಾರ 0.18 ಪೈಸೆ ಏರಿಕೆ ಮಾಡಲಾಗಿದೆ. ಆದರೆ, ಡೀಸೆಲ್ ಬೆಲೆಯಲ್ಲಿ ಮಾತ್ರ 0.70 ಪೈಸೆ ಇಳಿಕೆ ಮಾಡಲಾಗಿದ್ದು. ಇದರಂತೆ ಡೀಸೆಲ್ ಬೆಲೆ ರೂ.76.75 ಇದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.