ನವದೆಹಲಿ: ಸತತ ಏರುಗತಿಯಲ್ಲಿ ಸಾಗಿರುವ ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ ನಿಶ್ಚಲವಾಗಿದೆಯಾದರೂ ಡೀಸೆಲ್ ದರದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ.
ಸೋಮವಾರ ಬೆಳಗ್ಗೆ ಮತ್ತೆ ಡೀಸೆಲ್ ದರದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಡೀಸೆಲ್ ದರ 8 ರಿಂದ 9 ಪೈಸೆಯಷ್ಟು ಏರಿಕೆಯಾಗಿದೆ.
ಕೋಲ್ಕತಾ ಮತ್ತು ದೆಹಲಿಯಲ್ಲಿ ಡೀಸೆಲ್ ದರದಲ್ಲಿ 8 ಪೈಸೆಯಷ್ಟು ಏರಿಕೆಯಾಗಿದ್ದು, ಮುಂಬೈ ಮತ್ತು ಚೆನ್ನೈನಲ್ಲಿ ಪೆೈಸೆಯಷ್ಟು ಏರಿಕೆಯಾಗಿದೆ. ಆ ಮೂಲಕ ದೆಹಲಿಯಲ್ಲಿ ಪ್ರತೀ ಲೀಟರ್ ಡೀಸೆಲ್ ದರ 75.46ರೂ ಗೆ ಏರಿಕೆಯಾಗಿದ್ದು, ಕೋಲ್ಕತಾದಲ್ಲಿ 77. 31ರೂಗೆ ಏರಿಕೆಯಾಗಿದೆ.
ಡೀಸೆಲ್ ದರದಲ್ಲಿ ಏರಿಕೆಯಾಗಿದೆಯಾದರೂ ಪೆಟ್ರೋಲ್ ದರ ಸೋಮವಾರ ತಟಸ್ಥವಾಗಿದೆ. ಪೆಟ್ರೋಲ್ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬಂದಿಲ್ಲ.