ನವದೆಹಲಿ: 2018-19 ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವು ಮುಗಿದಿದೆ.
ವಾರ್ಷಿಕ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಆಗಸ್ಟ್ 31 ಕಡೆಯ ದಿನಾಂಕವಾಗಿತ್ತು. ಆಫ಼್ದರೆ ಕೇರಳದಲ್ಲಿ ನೆರೆ, ಪ್ರವಾಹದಿಂದ ಪ್ರತಿಕೂಲ ಪರಿಸ್ಥಿತಿ ನಿರ್ಮಾನವಾಗಿರುವ ಹಿನ್ನೆಲೆ ಕೇಂದ್ರ ಸರ್ಕಾರ ಇದನ್ನು ಸೆಪ್ಟೆಂಬರ್ 15 ರವರೆಗೆ ವಿಸ್ತರಿಸಿದೆ. ಈ ವಿಸ್ತರಣೆ ಆ ರಾಜ್ಯದ ಜನತೆಗೆಮಾತ್ರವೇ ಅನ್ವಯಿಸುತ್ತದೆ.
ಆಗಸ್ಟ್ 31ಕ್ಕೆ ಮುನ್ನ ಯಾರು ಆದಾಯ ತೆರಿಗೆ ರಿಟರ್ನ್ ಪಾವತಿಸಲಿಲ್ಲವೋ ಅಂತಹವರಿಗೆ ದಂಡ ಹಾಕುವುದನ್ನು ಕೇಂದ್ರ ಸರ್ಕಾರ ಮೊದಲೇ ಘೋಷಿಸಿತ್ತು. ಆದರೆ ದಂಡ ಪಾವತಿಯ ಹೊರತಾಗಿಯೂ ತೆರಿಗೆ ರಿಟರ್ನ್ ಸಲ್ಲಿಸದ ವ್ಯಾಪಾರಸ್ಥರು, ಉದ್ಯೋಗಿಗಳಿಗೆ ಇತರೆ ಅನಾನುಕೂಲ ಸಹ ಇದೆ ಎಂದು ತಜ್ಞರು ಹೇಳುತ್ತಾರೆ.
2017 ರ ಬಜೆಟ್ ನಲ್ಲಿ ಮಾಡಿದ ತಿದ್ದುಪಡಿಗಳ ಪ್ರಕಾರ, ಯಾರು ಆಗಸ್ಟ್ 31ಕ್ಕೆ ಮುನ್ನ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿಲ್ಲವೋ ಮತ್ತು ಡಿಸೆಂಬರ್ 31ಕ್ಕೆ ಮುನ್ನ ಸಲ್ಲಿಕೆ ಮಾಡುವರೋ ಅಂತಹಾ ಪ್ರತಿಯೊಬ್ಬ ತೆರಿಗೆದಾರನು ರೂ. 5,000 ದಂಡವನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ,
ಇದೇ ರೀತಿ ಯಾರು ತೆರಿಗೆದಾರನು ಜನವರಿ 1, 2019 ರ ನಂತರ ತೆರಿಗೆಯನ್ನು ಪಾವತಿಸಿದಲ್ಲಿ ಅವನಿಗೆ ರೂ .10,000 ದಂಡ ಹಾಕಲಾಗುತ್ತದೆ. ಇನ್ನು ತೆರಿಗೆದಾರನ ಒಟ್ಟು ಆದಾಯ ರೂ 5 ಲಕ್ಷಕ್ಕಿಂತ ಕಡಿಮೆಯಿದ್ದಲ್ಲಿ ಅಂತಹಾ ತೆರಿಗೆದಾರರಿಗೆ ದಂಡದ ಮೊತ್ತ ರೂ 1,000 ಕ್ಕಿಂತ ಹೆಚ್ಚಾಗುವುದಿಲ್ಲ.
ನಗದು ದಂಡ ವಸೂಲಿಯಲ್ಲದೆ ತೆರಿಗೆದಾರರು ನಿಗದಿತ ದಿನಾಂಕದೊಳಗೆ ತೆರಿಗೆ ಪಾವತಿಸದೆ ಹೋದರೆ ಅಂತಹವರು ವ್ಯ್ವಹಾರದ ಲಾಭ, ನಷ್ಟ್ಗಳ ವಿಲೇವಾರಿಗೆ ಅನುಮತಿಸುವುದಿಲ್ಲ.
ತೆರಿಗೆದಾರರು ತಡವಾಗಿ ತೆರಿಗೆ ಪಾವತಿಸಿದರೆ ಅಥವಾ ತೆರಿಗೆ ರಿಟರ್ನ್ ಸಲ್ಕ್ಲಿಕೆ ಮಾಡಿದರೆ ಅಂತಹವರಿಗೆ ರಿಟರ್ನ್ ಗೆ ಯೋಗ್ಯವಾಗಿದ್ದರೂ ಸಹ ಅವರ ನಷ್ಟ ಭರ್ತಿಗೆ ಅವಕಾಶವಿಲ.ವ್ಯವಹಾರ ಮತ್ತು ವೃತ್ತಿ ಆದಾಯ ತೋರಿಸಲು ಸಹ ಅನುಮತಿ ಇಲ್ಲ.
ಅಲ್ಲದೆ, ಯಾವುದೇ ಬಾಕಿ ಉಳಿದಿರುವ ತೆರಿಗೆ ಹೊಣೆಗಾರಿಕೆ ಮತ್ತು ಆದಾಯ ತೆರಿಗೆ ರಿಟರ್ನ್ ಅನ್ನು ಗಡುವು ಒಳಗೆ ಸಲ್ಲಿಸದಿದ್ದರೆ, ರಿಟರ್ನ್ ಸಲ್ಲಿಸುವ ದಿನಾಂಕದ ತನಕ ತಿಂಗಳಿಗೆ 1 ಶೇಕಡಾ ಅಥವಾ ತಿಂಗಳ ಒಂದು ಭಾಗ (ಪಾರ್ಟ್ ಆಫ್ ದಿ ಮಂತ್) ಬಡ್ಡಿಯನ್ನು ವಿಧಿಸಲಾಗುವುದು.
ಬಡ್ಡಿಯನ್ನು ಮೂಲದಲ್ಲಿ ಕಡಿತಗೊಳಿಸಿದ ತೆರಿಗೆ ಮೇಲಾಗಲಿ, ಸಂಗ್ರಹಿಸಿದ ತೆರಿಗೆ ಮತ್ತು ಮುಂಗಡ ತೆರಿಗೆಯನ್ನು ಕಡಿತಗೊಳಿಸಿದ ನಂತರ ಪಾವತಿಸಬೇಕಾದ ತೆರಿಗೆಯ ಮೇಲಾಗಲಿ ವಿಧಿಸುವ ಅವಕಾಶವಿದೆ.
ಹೀಗಿದ್ದರೂ ಇದು ತೆರಿಗೆ ಪಾವತಿಸದೆ ಇರುವುದಕ್ಕಿಂತ ತಡವಾಗಿ ಪಾವತಿಸುವುಉದ್ ಉತ್ತಮ. "ಸಂಬಂಧಿತ" ಹಣಕಾಸು ವರ್ಷ (ಮಾರ್ಚ್ 31, 2019,) ಅಂತ್ಯದವರೆಗೆ ತೆರಿಗೆ ಸಲ್ಲಿಸುವ ಅವಕಾಶವಿದೆ. (ಆದಾಯ ತೆರಿಗೆ ಕಾಯಿದೆಯ ವಿಭಾಗ 139 (4)).
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos