ವಾಣಿಜ್ಯ

ವಿಮಾನಯಾನ ಉದ್ಯಮಕ್ಕೆ ಪ್ರಸಕ್ತ ವರ್ಷದಲ್ಲಿ 1.9 ಬಿಲಿಯನ್ ಡಾಲರ್ ನಷ್ಟ!

Srinivas Rao BV
ಹೆಚ್ಚುತ್ತಿರುವ ಬೆಲೆಗಳ ನಡುವೆ ಕಡಿಮೆ ವಿಮಾನಯಾನ ದರದ ಪರಿಣಾಮವಾಗಿ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳು 1.9 ಬಿಲಿಯನ್ ಡಾಲರ್ ನಷ್ಟು ನಷ್ಟ ಎದುರಿಸುವ ಸಾಧ್ಯತೆ ಇದೆ ಎಂದು ಸಿಎಪಿಎ ಇಂಡಿಯಾ ಹೇಳಿದೆ. 
ಮಾರ್ಚ್ 31 ವರೆಗೆ ನಿರೀಕ್ಷಿಸಲಾಗಿದ್ದ ನಷ್ಟದ ಮೊತ್ತ 430 ಮಿಲಿಯನ್ ನಷ್ಟಿತ್ತು. ಆದರೆ ಈಗ ನಿರೀಕ್ಷೆಗೂ ಮೀರಿ ಅಂದರೆ 460 ಮಿಲಿಯನ್ ಡಾಲರ್ ನಷ್ಟ ಉಂಟಾಗಿದ್ದು, ರೂಪಾಯಿ ಮೌಲ್ಯ ಕುಸಿತ ಹಾಗೂ ತೈಲ ಬೆಲೆ ಏರಿಕೆಯಿಂದಾಗಿ ನಷ್ಟ ಉಂಟಾಗಿದೆ ಎಂದು ಸಿಎಪಿಎ ಹೇಳಿದೆ. 
ನಿರ್ವಹಣೆ ಮಾಡಲು ತಗುಲುತ್ತಿರುವ ವೆಚ್ಚಕ್ಕೆ ತಕ್ಕಂತೆ ಟಿಕೆಟ್ ದರಗಳನ್ನು ಏರಿಕೆ ಮಾಡಲಾಗುತ್ತಿಲ್ಲ, ಹೆಚ್ಚುತ್ತಿರುವೆ ವೆಚ್ಚ ಹಾಗೂ ಕಡಿಮೆ ಆದಾಯವನ್ನು ತಡೆದುಕೊಳ್ಳುವುದಕ್ಕೆ ಯಾವುದೇ ವಿಮಾನ ಸಂಸ್ಥೆಗಳಿಗೂ ಸಾಕಷ್ಟು ಬ್ಯಾಲೆನ್ಸ್ ಶೀಟ್ ಗಳು ಇಲ್ಲದಾಗಿದೆ. 
SCROLL FOR NEXT