ವಾಣಿಜ್ಯ

ನಿವೃತ್ತಿಯ ಆಶಯ ವ್ಯಕ್ತಪಡಿಸಿದ ಚೀನಾ ಪ್ರಖ್ಯಾತ ಉದ್ಯಮಿ ಜಾಕ್ ಮಾ

Raghavendra Adiga
ಬೀಜಿಂಗ್: ಪ್ರಖ್ಯಾತ ಆನ್ ಲೈನ್ ವ್ಯಾಪಾರಿ ಸಂಸ್ಥೆ "ಅಲಿಬಾಬಾ" ಸಂಸ್ಥಾಪಕ  ಅಧ್ಯಕ್ಷ ಜಾಕ್ ಮಾ ಸಂಸ್ಥೆಯ ಉನ್ನತ ಸ್ಥಾನದಿಂದ ನಿವೃತ್ತಿ  ಘೋಷಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮೊದಲು ನಾನು ನಿರ್ವಹಿಸುತ್ತಿದ್ದ ಶಿಕ್ಷಕ ವೃತ್ತಿಯನ್ನೇ ಮುಂದುವರಿಸಿಕೊಂಡು ಹೋಗುವುದಾಗಿ ಅವರು ನ್ಯೂಯಾರ್ಕ್ ಟೈಮ್ಸ್ ಗೆ ನಿಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.
ಜಾಕ್ ಮಾ 1999ರಲ್ಲಿ ಅಲಿಬಾಬಾ ಸಂಸ್ಥೆ ಸ್ಥಾಪನೆಗೆ ಮುನ್ನ ಆಂಗ್ಲ ಭಾಷಾ ಶಿಕ್ಷಕರಾಗಿದ್ದರು. ಸುಮಾರು28 ಲಕ್ಷ ಕೊಟಿ ವಹಿವಾಟಿನ ಅಲಿಬಾಬಾ ಸಂಸ್ಥೆ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ಹಸ್ತಾಂತರಿಸಿ ತಾವು ಶಿಕ್ಷಕ ವೃತ್ತಿ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ. ಸೆಪ್ಟೆಂಬರ್ 10ಕ್ಕೆ 54ರ ವಸಂತಕ್ಕೆ ಕಾಲಿಡಲಿರುವ ಜಾಕ್ ಮಾ ಈ ನಿರ್ಧಾರ ಕಾರ್ಪೋರೇಟ್ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಚೀನಾದ ಶ್ರೀಮಂತರಲ್ಲಿ ಒಬ್ಬರಾಗಿರುಯ್ವ ಮಾ ಅವರ ತಾಯ್ನಾಡಿನಲ್ಲಿ ಪೂಜ್ಯ ವ್ಯಕ್ತಿಯಾಗಿದ್ದರು. ಇವರು 2013ರಲ್ಲಿಯೇ ಸಂಸ್ಥೆಯ ಸಿಇಓ ಸ್ಥಾನದಿಂದ ಕೆಳಗಿಳಿದಿದ್ದರು ಎನ್ನುವುದು ಗಮನಾರ್ಹ.
2.73 ಲಕ್ಷ ಕೋಟಿ ಮೋಲ್ಯದ ವೈಯುಕ್ತಿಕ ಆಸ್ತಿ ಹೊಂದಿರುವ ಮಾ ತಾವು ಜಾಕ್ ಮಾ ಪ್ರತಿಷ್ಠಾನವನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಸಾಮಾಜಿಕ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಆಲೋಚನೆ ಇದೆ ಎಂದು ಹೇ:ಳಿದ್ದಾರೆ.
SCROLL FOR NEXT