ಮತ್ತೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಸಾರ್ವಕಾಲಿಕ ದಾಖಲೆ!
ಅತ್ತ ಪೆಟ್ರೋಲ್ ದರ ದಿನೇ ದಿನೇ ಏರುತ್ತಿರುವಂತೆಯೇ ಇತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ಕೂಡ ಕುಸಿತದತ್ತ ಸಾಗಿದೆ.
ಮುಂಬೈ: ಅತ್ತ ಪೆಟ್ರೋಲ್ ದರ ದಿನೇ ದಿನೇ ಏರುತ್ತಿರುವಂತೆಯೇ ಇತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ಕೂಡ ಕುಸಿತದತ್ತ ಸಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಏರಿಕೆಯಾಗುತ್ತಿರುವಂತೆಯೇ ಇತ್ತ ರೂಪಾಯಿ ಮೌಲ್ಯ ಕೂಡ ಕುಸಿಯುತ್ತಿದ್ದು, ಇಂದು ವಹಿವಾಟು ಆರಂಭವಾಗುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಮೌಲ್ಯ 33 ಪೈಸೆಯಷ್ಟು ಕುಸಿತಗೊಂಡಿದೆ. ಆ ಮೂಲಕ ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 72.96ಕ್ಕೆ ಕುಸಿದಿದೆ.
ಇನ್ನು ಹಾಲಿ ರೂಪಾಯಿ ಮೌಲ್ಯ 4 ವರ್ಷಗಳ ಈ ಹಿಂದಿನ ದಾಖಲೆಯನ್ನು ಮುಟ್ಟಿದ್ದು, ಈ ಹಿಂದೆ 2014ರಲ್ಲೂ ರೂಪಾಯಿ ಮೌಲ್ಯ ಇಷ್ಟೇ ಪ್ರಮಾಣಕ್ಕೆ ಏರಿಕೆಯಾಗಿತ್ತು.
ಇನ್ನು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಛಾ ತೈಲದರಲ್ಲಿ ಶೇ.3ರಷ್ಟು ಏರಿಕೆಯಾಗಿದ್ದು, ಪ್ರತೀ ಬ್ಯಾರೆಲ್ ತೈಲ ದರ 81 ಡಾಲರ್ ಗೆ ಏರಿಕೆಯಾಗಿದೆ. ಹಾಲಿ ದರ ಪ್ರತೀ ಬ್ಯಾರೆಲ್ ಗೆ 81.28ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಇನ್ನು ನಿನ್ನೆ ಅಮೆರಿಕ ಸರ್ಕಾರ ಭಾರತ, ಚೀನಾ ಸೇರಿದಂತೆ ಹಲವು ದೇಶಗಳ ವಾಣಿಜ್ಯ ವಹಿವಾಟುಗಳ ಮೇಲೆ ಹೇರಿದ್ದ ನಿರ್ಬಂದ ಹಾಗೂ ಭಾರತೀಯ ವಸ್ತುಗಳ ಮೇಲಿನ ಆಮದು ಸುಂಕ ಏರಿಕೆ ಬೆಳವಣಿಗೆಯಿಂದಾಗಿ ರುಪಾಯಿಮೌಲ್ಯದಲ್ಲಿ 43ಪೈಸೆಯಷ್ಟು ಕುಸಿತವಾಗಿತ್ತು. ಅಲ್ಲದೆ ಇರಾನ್ ಸೇರಿದಂತೆ ಕೆಲ ತೈಲೋತ್ಪಾದನಾ ರಾಷ್ಟ್ರಗಳ ಮೇಲೆ ಅಮೆರಿಕ ಹೇರಿರುವ ನಿರ್ಬಂಧ ಕೂಡ ತೈಲ ದರ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.