ವಾಲ್ ಮಾರ್ಟ್ 
ವಾಣಿಜ್ಯ

ಭಾರತದ ರೈತರ ಜೀವನಮಟ್ಟ ಸುಧಾರಣೆ ಗುರಿ: ವಾಲ್ ಮಾರ್ಟ್ ನಿಂದ 25 ದಶಲಕ್ಷ ಡಾಲರ್ ಹೂಡಿಕೆ

2023ರ ವೇಳೆಗೆ ಚಿಲ್ಲರೆ ವಹಿವಾಟು ದೈತ್ಯ ಸಂಸ್ಥೆಯಾದ ವಾಲ್ ಮಾರ್ಟ್ ಭಾರತದಲ್ಲಿ 181 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಮೂಲಕ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ....

ಬೆಂಗಳೂರು: 2023ರ ವೇಳೆಗೆ ಚಿಲ್ಲರೆ ವಹಿವಾಟು ದೈತ್ಯ ಸಂಸ್ಥೆಯಾದ ವಾಲ್ ಮಾರ್ಟ್ ಭಾರತದಲ್ಲಿ 181 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಮೂಲಕ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ  ಗುರಿಯಾದ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವದಕ್ಕೆ ಸಹಕರಿಸಲಿದೆ.
"ಮುಂದಿನ ಐದು ವರ್ಷಗಳಲ್ಲಿ ರೈತರ ಜೀವನೋಪಾಯವನ್ನು ಸುಧಾರಿಸಲು ವಾಲ್ ಮಾರ್ಟ್ ಫೌಂಡೇಶನ್ 25 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ." ಅಮೆರಿಕ ಮೂಲದ ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.
ಚಿಲ್ಲರೆ  ಕ್ಷೇತ್ರದ ದೈತ್ಯ ಮುಂದಿನ ಐದು ವರ್ಷಗಳಲ್ಲಿ ತನ್ನ ಕ್ಯಾಶ್ ಆಂಡ್ ಕ್ಯಾರಿ ಳಿಗೆಯಲ್ಲಿ ಮಾರಾಟವಾದ ಶೇ.25 ರಷ್ಟು ಆದಾಯವನ್ನು ನೇರವಾಗಿ ರೈತರಿಗೆ ನೀಡುವ ಗುರಿ ಇದೆ. "ಸಣ್ಣ ರೈತರು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿದ್ದು  ಈ ಕ್ಷೇತ್ರದಲ್ಲಿ ಶೇ. 50ರಷ್ಟು ಮಂದಿ ತೊಡಗಿಸಿಕೊಂಡಿದ್ದಾರೆ" ಅದು ಹೇಳಿದೆ.
2022 ರ ಹೊತ್ತಿಗೆ ರೈತರು ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಭಾರತ ಸರ್ಕಾರ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದು, ಅದರ ಉಪಕ್ರಮವು ಭಾರತದ ಆಹಾರ ಭದ್ರತೆಯನ್ನು ಸುಧಾರಿಸುತ್ತದೆ ಮತ್ತು ಆರ್ಥಿಕತೆಯನ್ನು  ಬಲಪಡಿಸುತ್ತದೆ ಎನ್ನುವ ವಿಶ್ವಾಸವಿದೆ.
ಹೊಸ ಹೂಡಿಕೆಯಿಂದ ರೈತ ಉತ್ಪಾದಕ ಸಂಸ್ಥೆಗಳ ಅಭಿವೃದ್ಧಿಗೆ ಸಹಾಯ ಆಗಲಿದ್ದು ಗ್ರಾಮೀಣ ಪ್ರದೇಶಗಳ ಆದಾಯ ಹೆಚ್ಚಳವಾಗಲಿದೆ.
ರೈತ ಸಂಘಟನೆಗಳಿಗೆ ಅಧಿಕಾರ ನೀಡಿ ರಾಷ್ಟ್ರವ್ಯಾಪಿ ರೈತರ ಬೆಂಬಲ ಜಾಲಕ್ಕೆ ಸಂಪರ್ಕ ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಹೇಳಿದೆ.
ಲಖನೌದಲ್ಲಿ ಹಣಕಾಸಿನ ಉಪಕ್ರಮವನ್ನು ಘೋಷಿಸಿದ ವಾಲ್ ಮಾರ್ಟ್ ಇಂಟರ್ ನ್ಯಾಷನಲ್ ಮುಖ್ಯ ಕಾರ್ಯನಿರ್ವಾಹಕ ಜುಡಿತ್ ಮ್ಯಾಕ್ಕೆನಾ ಕಂಪನಿಯು ಸಣ್ಣ ರೈತರಿಗೆ ಹೆಚ್ಚು ಅವಕಾಶವನ್ನು ಸೃಷ್ಟಿಸುತ್ತಿದೆ ದೇಶಾದ್ಯಂತ ಅದರ ಸರಕು ಸರಬರಾಜು ಸರಪಣಿಗೆ ಮತ್ತು ಅಂಗಡಿಗಳಿಗೆ ಕೃಷಿ ಉತ್ಪನ್ನಗಳನ್ನು ಅಲ್ಲಿನ ಸ್ಥಳೀಯ ಮೂಲಗಳಿಂದಲೇ ಖರೀದಿಸಲಾಗುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT