ನವದೆಹಲಿ: ದೆಹಲಿಯ ಪ್ರತಿಷ್ಠಿತ ಹೋಟೆಲ್ ತಾಜ್ ಮಾನ್ಸಿಂಗ್ ಹೋಟೆಲ್ ಮಾಲಿಕತ್ವವನ್ನು ಟಾಟಾ ಗ್ರೂಪ್ ಇಂಡಿಯನ್ ಹೊಟೇಲ್ ಕಂಪನಿ ಲಿಮಿಟೆಡ್ (ಐಎಚ್ಸಿಎಲ್) ಹರಾಜಿನಲ್ಲಿ ತನ್ನದಾಗಿಸಿಕೊಂಡಿದೆ.
ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಶುಕ್ರವಾರ ನಡೆಸಿದ್ದ ಹರಾಜಿನಲ್ಲಿ ತಾಜ್ ಗ್ರೂಪ್ಇ-ಹರಾಜಿನಲ್ಲಿ ಮಾನ್ಸಿಂಗ್ ಆಸ್ತಿಯನ್ನು 3.2% ರಷ್ಟು ಒಟ್ಟು ವಹಿವಾಟಿನಿಂದ ಗೆದ್ದಿದೆ ಎಂದು ಪಿಟಿಐ ವರದಿ ಮಾಡಿದೆ. ಇಂಡಿಯನ್ ಹೊಟೇಲ್ ಕಂಪನಿ ಮತ್ತು ಐಟಿಸಿ ಹೊಟೆಲ್ ಗಳು ಇಂದಿನ ಹರಾಜಿನಲ್ಲಿ ಭಾಗವಹಿಸಿದ್ದವು.
ರಾಷ್ಟ್ರ ರಾಜಧಾನಿ ದೆಹಲಿಯ ಹೃದಯಭಾಗದಲ್ಲಿರುವ 292 ಕೋಣೆಗಳ ಐಷಾರಾಮಿ ಹೋಟೆಲ್ ಇದಾಗಿದೆ.ಇ-ಹರಾಜು ಬೆಳಗ್ಗೆ 11 ಗಂಟೆಗೆ ಆರಂಭಗೊಂಡು, ಇಂದು 4 ಗಂಟೆಗೆ ಮುಕ್ತಾಯವಾದ್ದು 7.03 ಕೋಟಿ ರೂಪಾಯಿಗಳ ಪರವಾನಗಿ ಶುಲ್ಕದೊಡನೆ ಕೊನೆಗೊಂಡಿದೆ.
ಟಾಟಾ ಸಮೂಹದ ಇಂಡಿಯನ್ ಹೊಟೇಲ್ ಕಂಪನಿ ಲಿಮಿಟೆಡ್ (ಐಹೆಚ್ಸಿಎಲ್) ಜಿಎಸ್ಟಿ ಸೇರಿದಂತೆ ಪ್ರತಿ ತಿಂಗಳು 7.03 ಕೋಟಿ ರೂಪಾಯಿಗಳ ಪರವಾನಗಿ ಶುಲ್ಕದೊಡನೆ ತನ್ನದಾಗಿಸಿಕೊಂಡಿದೆ.
ಈ ಹೋಟೆಲ್ ಅನ್ನು 1978 ರಲ್ಲಿ 33 ವರ್ಷಗಳ ಲೀಸ್ ಗಾಗಿ ಟಾಟಾ ಸಮೂಹಕ್ಕೆ ನೀಡಲಾಗಿತ್ತು. ಈ ಲೀಸ್ ಅವಧಿಯು 2011 ರಲ್ಲಿ ಕೊನೆಗೊಂಡಿತು. ಆದರೆ ಅವಧಿ ಪೂರ್ಣಗೊಂಡು ಏಳು ವರ್ಷಗಳಾದರೂ ಹರಾಜು ಪ್ರಕ್ರಿಯೆ ಂಆತ್ರ ಬಾಕಿ ಉಳಿದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics