ವಾಣಿಜ್ಯ

ರೀಟೇಲ್ ಹಣದುಬ್ಬರ ಶೇ.2.86ಕ್ಕೆ ಏರಿಕೆ

Nagaraja AB

ನವದೆಹಲಿ: ಇಂಧನ ತೈಲಗಳು ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ದೇಶದ  ರೀಟೇಲ್‌ ಹಣದುಬ್ಬರ 2019ರ ಮಾರ್ಚ್‌ ಅಂತ್ಯಕ್ಕೆ ಶೇ. 2.86ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ.

ಫೆಬ್ರವರಿಯಲ್ಲಿ ಈ ಹಣದುಬ್ಬರ ಶೇ.2.57ಕ್ಕೆ ಪರಿಷ್ಕೃತಗೊಂಡಿತ್ತು. ಆಹಾರ ದರ ಸೂಚ್ಯಂಕ (ಸಿಎಫ್‌ಪಿಐ) ಶೇ.೦.3ಕ್ಕೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳು ಹೇಳಿವೆ.

ಗ್ರಾಮೀಣ ಭಾಗದಲ್ಲಿನ ರೀಟೇಲ್‌ ಹಣದುಬ್ಬರ ಶೇ.1.8ರಷ್ಟಿದ್ದು, ನಗರ ಪ್ರದೇಶದಲ್ಲಿ ಶೇ.4.1ರಷ್ಟಿದೆ. ಇಂಧನ ತೈಲ ಹಣದುಬ್ಬರ ಶೇ. 2.42ರಷ್ಟಿದೆ.

ಏ.4ರಂದು ಆರ್‌ಬಿಐ ರೆಪೊ ದರವನ್ನು 25 ಬೇಸಿಸ್‌ ಪಾಯಿಂಟ್‌ನಷ್ಟು ಇಳಿಕೆ ಮಾಡಿತ್ತು.  ಇದು 2019ರಲ್ಲಿ 2ನೇ ಸಲ ದರ ಕಡಿತವಾಗಿದೆ. ಕೇಂದ್ರೀಯ ಬ್ಯಾಂಕ್, ಗ್ರಾಹಕ ಹಣದುಬ್ಬರವನ್ನು ಶೇ.4ಕ್ಕೆ ನಿಗದಿಪಡಿಸಿದೆ.

SCROLL FOR NEXT