ಸಾಂದರ್ಭಿಕ ಚಿತ್ರ 
ವಾಣಿಜ್ಯ

ಆರ್‏ಟಿಐ ಅಡಿ ಬ್ಯಾಂಕ್ ತಪಾಸಣೆ ವರದಿಯನ್ನು ಬಹಿರಂಗಪಡಿಸುವಂತೆ ಆರ್‏ಬಿಐಗೆ 'ಸುಪ್ರೀಂ' ತಾಕೀತು

ಮಾಹಿತಿ ಹಕ್ಕು ಕಾಯ್ದೆಯಡಿ ಬ್ಯಾಂಕುಗಳ ವಾರ್ಷಿಕ ತಪಾಸಣೆ ವರದಿಯ ಮಾಹಿತಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ...

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆಯಡಿ ಬ್ಯಾಂಕುಗಳ ವಾರ್ಷಿಕ ತಪಾಸಣೆ ವರದಿಯ ಮಾಹಿತಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಿಸರ್ವ್ ಬ್ಯಾಂಕ್ ಗೆ ಆದೇಶ ನೀಡಿದೆ. ಕಾನೂನಿನಡಿಯಲ್ಲಿ ವಿನಾಯಿತಿ ನೀಡದ ಹೊರತು ಆರ್ ಬಿಐ ಮಾಹಿತಿ ಬಹಿರಂಗಪಡಿಸದೆ ಇರುವಂತಿಲ್ಲ ಎಂದು ಕೂಡ ಹೇಳಿದೆ.
ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠ, ಆರ್ ಬಿಐಗೆ ವಾರ್ಷಿಕ ತಪಾಸಣೆ ವರದಿ ಬಹಿರಂಗಪಡಿಸುವ ಕುರಿತು ತನ್ನ ನೀತಿಯನ್ನು ಪರಾಮರ್ಶಿಸುವಂತೆ ಕೂಡ ಹೇಳಿದೆ. ಇದು ಕಾನೂನಿನಡಿಯಲ್ಲಿ ಪಾಲಿಸಬೇಕಾದ ಕರ್ತವ್ಯವಾಗಿದೆ ಎಂದು ಕೂಡ ನ್ಯಾಯಪೀಠ ಹೇಳಿದೆ. ಆರ್ ಬಿಐ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಈ ಬಾರಿ ಮುಂದುವರಿಸದ ಸುಪ್ರೀಂ ಕೋರ್ಟ್ ಕಾನೂನಿನ ಪಾರದರ್ಶಕತೆ ದೃಷ್ಟಿಯಿಂದ ವಾರ್ಷಿಕ ತಪಾಸಣೆ ವರದಿಯನ್ನು ಅನುಸರಿಸಲು ಆರ್ ಬಿಐಗೆ ಕೊನೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಆರ್ ಬಿಐ ವಿವರ ನೀಡದಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ತೆಗೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.
ಕಳೆದ ಜನವರಿಯಲ್ಲಿ ಬ್ಯಾಂಕುಗಳ ವಾರ್ಷಿಕ ತಪಾಸಣೆ ವರದಿಯನ್ನು ಬಹಿರಂಗಪಡಿಸದ ಆರ್ ಬಿಐಗೆ ನ್ಯಾಯಾಂಗ ನಿಂದನೆ ನೊಟೀಸ್ ಜಾರಿ ಮಾಡಲಾಗಿತ್ತು.
ತಾನು ವಾರ್ಷಿಕವಾಗಿ ನಡೆಸುವ ಬ್ಯಾಂಕ್​ಗಳ ತಪಾಸಣೆ ಕುರಿತ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​ಟಿಐ) ಬಹಿರಂಗಗೊಳಿಸುವಂತೆ ತಾನು ನೀಡಿದ್ದ ಸೂಚನೆಯನ್ನು ಪಾಲಿಸಲು ಸುಪ್ರೀಂಕೋರ್ಟ್​ ಭಾರತೀಯ ರಿಸರ್ವ್​ ಬ್ಯಾಂಕ್​ಗೆ (ಆರ್​ಬಿಐ) ಕೊನೇ ಅವಕಾಶ ನೀಡಿದೆ.

ಆರ್​ಟಿಐ ಅಡಿ ಈ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್​ ಈ ಹಿಂದೆಯೇ ಆರ್​ಬಿಐಗೆ ಸೂಚನೆ ನೀಡಿತ್ತು. ಆದರೆ, ಆರ್​ಬಿಐ ಅದನ್ನು ಈವರೆಗೂ ಪಾಲಿಸಿರಲಿಲ್ಲ. ಆದ್ದರಿಂದ, ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಆರ್​ಬಿಐ ಅನ್ನು ಸುಪ್ರೀಂಕೋರ್ಟ್​ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video