ವಾಣಿಜ್ಯ

1 ಟ್ರಿಲಿಯನ್ ಡಾಲರ್ ಕ್ಲಬ್ ಸೇರಿದ ಮೈಕ್ರೋಸಾಫ್ಟ್!: ಲಾಭ ಗಳಿಸಲು ನಾದೆಳ್ಲ ಮಂತ್ರ 'ಕ್ಲೌಡ್ ಫಸ್ಟ್, ಮೊಬೈಲ್ ಫಸ್ಟ್'!

Srinivas Rao BV
ನಷ್ಟದಲ್ಲಿದ್ದ ಮೈಕ್ರೋಸಾಫ್ಟ್ ಸಂಸ್ಥೆ ಚೇತರಿಕೆ ಕಂಡು ಈಗ 1 ಟ್ರಿಲಿಯನ್ ಡಾಲರ್ ಕ್ಲಬ್ ಸೇರಿದ್ದು, ವಾಲ್ ಸ್ಟ್ರೀಟ್ ತನ್ನ ವಿಶ್ಲೇಷಣೆಯಲ್ಲಿ ಮೈಕ್ರೋಸಾಫ್ಟ್ ನ ಸಿಇಒ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ. 
ಆಪಲ್, ಅಮೇಜಾನ್ ನಂತರ 1 ಟ್ರಿಲಿಯನ್ ಡಾಲರ್ ಹೊಂದಿರುವ ಕಂಪನಿಗಳ ಪಟ್ಟಿಯಲ್ಲಿ ದಾಖಲಾಗಿದ್ದು, 2014 ರಲ್ಲಿ ಸತ್ಯ ನಾದೆಳ್ಲ ಸಿಇಒ ಆಗಿ ನೇಮಕಗೊಂಡ ಬಳಿಕ ಸಂಸ್ಥೆ ಅದ್ಭುತ ಬೆಳವಣಿಗೆ ಕಂಡಿದೆ. "ಇಡೀ ಜಗತ್ತು, ಕ್ಲೌಡ್ ಫಸ್ಟ್, ಮೊಬೈಲ್ ಫಸ್ಟ್ ಟ್ರೆಂಡ್ ನದ್ದಾಗಿದೆ.  ಗ್ರಾಹಕರು ಕೇಳುವ ಮುನ್ನವೇ ಅವರ ಅಗತ್ಯತೆಗಳನ್ನು ಪೂರೈಸುವುದು ಸಂಸ್ಥೆಯ ಅಭೂತಪೂರ್ವ ಯಶಸ್ಸಿನ ಹಿಂದಿನ ಗುಟ್ಟು" ಎನ್ನುತ್ತಾರೆ ಸಿಇಒ ಸತ್ಯ ನಾದೆಳ್ಲ.  ಸತ್ಯ ನಾದೆಳ್ಲ ಮುನ್ನ ಸ್ಟೀವ್ ಬಾಲ್ಮರ್ ಸಿಇಒ ಆಗಿದ್ದಾಗ ಮೈಕ್ರೋಸಾಫ್ಟ್ ಷೇರುಗಳು ಕುಸಿತ  ಕಂಡಿದ್ದವು. ಆದರೆ ಸತ್ಯ ನಾದೆಳ್ಲ ಅಧಿಕಾರ ವಹಿಸಿಕೊಂಡ ವರ್ಷದಲ್ಲಿ ಮೈಕ್ರೋ ಸಾಫ್ಟ್ ಷೇರುಗಳು ಶೇ.14 ರಷ್ಟು ಏರಿಕೆಯಾಗಿತ್ತು.   2015 ರಲ್ಲಿ ಶೇ.21 ರಷ್ಟು ಏರಿಕೆಯಾಗಿತ್ತು. 
ನಾದೆಳ್ಲ ಅವಧಿಯಲ್ಲಿ ಮೈಕ್ರೋಸಾಫ್ಟ್ ಲಿಂಕ್ಡ್ ಇನ್ ಹಾಗೂ ಗಿಟ್ ಹಬ್ ನ್ನು ಖರೀದಿಸಿತ್ತು. ಮೈಕ್ರೋ ಸಾಫ್ಟ್ ಡೆವಲಪರ್ ವಿಭಾಗಕ್ಕೆ ಗಿಟ್ ಹಬ್ ಸಹಕಾರಿಯಾದರೆ, ಲಿಂಕ್ಡ್ ಇನ್ ಅತಿ ಹೆಚ್ಚು ಆದಾಯ ತರುತ್ತಿದೆ.
ಈ ಹಿಂದಿನ ಯಶಸ್ಸು ಇಂದಿಗೆ ಏನೂ ಅಲ್ಲ. ಇಲ್ಲೇನಿದ್ದರೂ ಭವಿಷ್ಯದ್ದೇ ಕಾರುಬಾರು, ಪ್ರತಿ ಕ್ಷೇತ್ರವೂ ಹಾಗೆಯೇ ನಡೆಯುತ್ತಿದೆ ಎಂದು ನಾದೆಳ್ಲ ಹೇಳಿದ್ದಾರೆ. 
SCROLL FOR NEXT