ವಾಣಿಜ್ಯ

ವರಮಹಾಲಕ್ಶ್ಮಿ ಹಬ್ಬದಂದು ಗಗನಕ್ಕೇರಿದ ಬಂಗಾರದ ಬೆಲೆ: 38 ಸಾವಿರ ರೂ. ಗಡಿ ದಾಟಿದ ಚಿನ್ನ, ಬೆಳ್ಳಿ ಕೆಜಿಗೆ 44 ಸಾವಿರ ರೂ.!

Raghavendra Adiga
ನವದೆಹಲಿ: ವರಮಹಾಲಕ್ಷ್ಮಿ ದಿನದಂದೇ ಮಹಿಳೆಯರ ಅಚ್ಚುಮೆಚ್ಚಿನ ಚಿನ್ನಾಭರಣಗಳ ಬೆಲೆ ಗಗನಕ್ಕೇರಿ ಬಂಗಾರ ಖರೀದಿಸುವವರಿಗೆ ತೀವ್ರ ನಿರಾಶೆ ಮೂಡಿಸಿದೆ. ಗುರುವಾರ ಬಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೇ ಮೊದಲ ಬಾರಿಗೆ 38,000 ಗಡಿ ದಾಟಿದೆ. 550 ರೂ ದರ ಏರಿಕೆ ಕಂಡ ಚಿನ್ನದ ಬೆಲೆ  10 ಗ್ರಾಂಗೆ 38,470 ರೂ.ಗೆ ತಲುಪಿದೆ. ಅಮೆರಿಕಾ-ಚೀನಾದೊಂದಿಗಿನ ವ್ಯಾಪಾರದಲ್ಲಿನ ಉದ್ವಿಗ್ನತೆ ಹಾಗೂ ದೇಶೀಯ ಆರ್ಥಿಕ ಕಾಳಜಿಗಳ ಕಾರಣಕ್ಕಾಗಿ ಈ ಏರಿಕೆ ಕಂಡುಬಂದಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಮಾರುಕಟ್ಟೆಯಲ್ಲಿ ಕೆಜಿ ಬೆಳ್ಳಿಯ ಬೆಲೆ 44,000 ರೂ.ಗಳನ್ನು ದಾಟಿದ್ದು 630 ರೂ.ನಷ್ಟು ಏರಿಕೆಯಾಗಿ  ಪ್ರತಿ ಕೆ.ಜಿ.ಗೆ 44,300 ರೂ. ಗೆ ತಲುಪಿದೆ.
ಹೆಚ್ಚುತ್ತಿರುವ ಯುಎಸ್-ಚೀನಾ ವ್ಯಾಪಾರದ ಉದ್ವಿಗ್ನತೆ ವಾತಾವರಣದ ನಡುವೆ ಆರು ವರ್ಷಗಳಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ  1,500 ಯುಎಸ್ ಡಾಲರ್ ಗಡಿ ದಾಟಿದೆ.ಇದಲ್ಲದೆ, ದೇಶೀಯ ಆರ್ಥಿಕ ಕುಸಿತದ ಬಗೆಗಿನ ಕಳವಳಗಳು ಚಿನ್ನದಂತಹಾ ಅಮೂಲ್ಯ ಲೋಹದ ಮೇಲೆ ಜನರ ಮುತುವರ್ಜಿಯನ್ನು ಹೆಚ್ಚಿಸುತ್ತಿದೆ.
2019-20ರ ಮೂರನೇ ದ್ವಿ-ಮಾಸಿಕ ಪರಿಶೀಲನೆಯಲ್ಲಿ, ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಬುಧವಾರ ಭಾರತೀಯ ಆರ್ಥಿಕತೆಯ ಬೆಳವಣಿಗೆಯ ನಿರೀಕ್ಷೆ ಮಟ್ಟವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.9 ಕ್ಕೆ ಇಳಿಸಿದೆ. 
ಏತನ್ಮಧ್ಯೆ, ಜಾಗತಿಕವಾಗಿ, ಸ್ಪಾಟ್ ಚಿನ್ನವು ನ್ಯೂಯಾರ್ಕ್ ನಲ್ಲಿ ಔನ್ಸ್ ಒಂದಕ್ಕೆ  1,497.40 ಯುಎಸ್ಡಿಗಳಷ್ಟು ಕಡಿಮೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್ ಗೆ  17.16 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದೆ.
SCROLL FOR NEXT