ವಾಣಿಜ್ಯ

ಎಟಿಎಂ ವಿತ್ ಡ್ರಾ ಸೇವೆಯಲ್ಲಿ ಮಹತ್ವದ ಬದಲಾವಣೆ; 6 ರಿಂದ 12 ಗಂಟೆ ಅಂತರ ಕಾಯ್ದುಕೊಳ್ಳಲು ಚಿಂತನೆ!

Srinivasamurthy VN

ನವದೆಹಲಿ: ಎಟಿಎಂ ವಿತ್ ಡ್ರಾ ಸೇವೆಯಲ್ಲಿ ಮಹತ್ವದ ಬದಲಾವಣೆ ಬರುವ ಸಾಧ್ಯತೆಗಳಿದ್ದು, ನಿನ್ನೆಯಷ್ಚೇ ಕೆನರಾ ಬ್ಯಾಂಕ್ ಒಟಿಪಿ ವ್ಯವಸ್ಥೆ ಕುರಿತು ತನ್ನ ನಿರ್ಧಾರ ಪ್ರಕಟಿಸಿತ್ತು. ಇದೀಗ ಒಂದು ವಿತ್ ಡ್ರಾದಿಂದ ಮತ್ತೊಂದು ವಿತ್ ಡ್ರಾ ನಡುವೆ ಕನಿಷ್ಛ 6 ರಿಂದ 12 ಗಂಟೆಗಳ ಅಂತರ ಕಾಯ್ದುಕೊಳ್ಳುವ ಕುರಿತು ಚಿಂತನೆ ನಡೆಸಲಾಗುತ್ತಿದೆ. 

ಇತ್ತೀಚಿನ ದಿನಗಳಲ್ಲಿ ಎಟಿಎಂ ವಿತ್ ಡ್ರಾ ವಂಚನೆ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇತ್ತೀಚೆಗೆ, ಎಟಿಎಂ ವಂಚನೆ ಹೆಚ್ಚಾಗಿರುವುದಕ್ಕೆ ನ್ಯಾಯಾಲಯವು ಬ್ಯಾಂಕುಗಳನ್ನು ಖಂಡಿಸಿತು. ಇದೇ ಕಾರಣಕ್ಕೆ ಇದೇ ಕಾರಣಕ್ಕೆ ಬ್ಯಾಂಕಿಂಗ್ ಸಂಸ್ಥೆಗಳು ಎಟಿಎಂ ವಿತ್ ಡ್ರಾ ಸೇವೆಯಲ್ಲಿ ಕೆಲ ಮಹತ್ವದ ಬದಲಾವಣೆಗೆ ತರಲು ಮುಂದಾಗಿದೆ. 

ಎಟಿಎಂ ವಂಚನೆಯನ್ನು ತಡೆಯಲು ದೆಹಲಿ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಕೆಲವು ಕ್ರಮಗಳನ್ನು ಸೂಚಿಸಿದ್ದು, ಎಸ್‌ಎಸ್‌ಬಿಸಿ ನೀಡಿದ ಸಲಹೆಗಳನ್ನು ಅಂಗೀಕರಿಸಿದರೆ, ಎಟಿಎಂ ವಂಚನೆ ಪ್ರಕರಣಗಳಲ್ಲಿ ಇಳಿಕೆ ಕಂಡುಬರುತ್ತದೆ ಎಂದು ಸಮಿತಿ ಆಶಿಸಿದೆ. 

6 ರಿಂದ 12 ಗಂಟೆ ಅಂತರ ಕಾಯ್ದುಕೊಳ್ಳಲು ಚಿಂತನೆ!
ಎರಡು ಎಟಿಎಂ ವಹಿವಾಟುಗಳ ನಡುವೆ 6 ರಿಂದ 12 ಗಂಟೆಗಳ ಕಾಲ ಅಂತರ ಇಡಬೇಕು ಎಂದು ಸಮಿತಿ ಸೂಚಿಸಿದ್ದು, ಈ ಸಲಹೆಯನ್ನು ಅಂಗೀಕರಿಸಿದರೆ, ಬೆಳಿಗ್ಗೆ 10 ಗಂಟೆಗೆ ನಿಮ್ಮ ಖಾತೆಯಿಂದ 20 ಸಾವಿರ ರೂಪಾಯಿಗಳನ್ನು ವಿತ್ ಡ್ರಾ ಮಾಡಿದರೆ, ನಂತರ ಕನಿಷ್ಠ 6 ಗಂಟೆಗಳ ನಂತರ, ಅಂದರೆ ಮಧ್ಯಾಹ್ನ ಎರಡು ಗಂಟೆಗೆ ಮುಂದಿನ ವಿತ್ ಡ್ರಾ  ಮಾಡಲು ನಿಮಗೆ ಸಾಧ್ಯವಾಗುತ್ತದೆ. ಎಟಿಎಂಗಳಲ್ಲಿ ಹೆಚ್ಚಿನ ವಂಚನೆಗಳು ರಾತ್ರಿಯಲ್ಲಿ ನಡೆಯುತ್ತವೆ ಎಂದು ಸಮಿತಿ ಒಪ್ಪಿಕೊಂಡಿತು. ಈ ಪ್ರಕರಣಗಳಲ್ಲಿ ಹೆಚ್ಚಿನವು ಮಧ್ಯರಾತ್ರಿಯಿಂದ ಮುಂಜಾನೆಯವರೆಗೆ ನಡೆದಿರುವ ಬಗ್ಗೆ ವರದಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ವಂಚನೆಯನ್ನು ತಡೆಗಟ್ಟಲು, ಕಳೆದ ವಾರ 18 ಬ್ಯಾಂಕುಗಳ ಪ್ರತಿನಿಧಿಗಳ ಸಭೆಯಲ್ಲಿ ಚರ್ಚೆ ನಡೆದಿದೆ.

ನಿನ್ನೆಯಷ್ಟೇ ಕೆನರಾ ಬ್ಯಾಂಕ್ ತನ್ನ ಗ್ರಾಹಕರ ಎಟಿಎಂ ವಿತ್ ಡ್ರಾಗೆ ಒಟಿಪಿ ಕಡ್ಡಾಯಗೊಳಿಸುವ ಕುರಿತು ನಿರ್ಧಾರ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ದೆಹಲಿ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ ಎಟಿಎಂ ವಿತ್ ಡ್ರಾ ಗೆ 6 ರಿಂದ 12 ಗಂಟೆ ಅಂತರ ಕಾಯ್ದುಕೊಳ್ಳಲು ಚಿಂತನೆ ನಡೆಸಿದೆ.

SCROLL FOR NEXT