ವಾಣಿಜ್ಯ

ಎಸ್ ಬಿಐ ಗ್ರಾಹಕರಿಗೆ ಸಿಹಿ ಸುದ್ದಿ: ಬೆಂಚ್ ಮಾರ್ಕ್ ಆಧಾರಿತ ದರ ಇಳಿಕೆ 

Sumana Upadhyaya

ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಾಹ್ಯ ಮಾನದಂಡ ಆಧಾರಿತ ದರವನ್ನು(external benchmark-based rate) 25 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆ ಮಾಡಿದ್ದು ಇದರಿಂದ ಈಗಿರುವ ದರ ಶೇಕಡಾ 8.05ರಿಂದ ಶೇಕಡಾ 7.80ಕ್ಕೆ ಇಳಿಕೆಯಾಗಲಿದೆ.


ಪರಿಷ್ಕೃತ ದರ ಹೊಸ ವರ್ಷ ಜನವರಿ 1, 2020ರಿಂದ ಜಾರಿಗೆ ಬರಲಿದೆ ಎಂದು ಎಸ್ ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ದರ ಇಳಿಕೆಯಿಂದ ಗ್ರಾಹಕರಿಗೆ ಗೃಹ ಸಾಲದ ಮೇಲಿನ ಬಡ್ಡಿದರ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳ ಸಾಲ ಮೇಲಿನ ಬಡ್ಡಿದರ 25 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆಯಾಗಲಿದೆ ಎಂದು ತಿಳಿಸಿದೆ.


ಬಾಹ್ಯ ಮಾನದಂಡ ಆಧಾರಿತ ದರ ಇಳಿಕೆಯಿಂದಾಗಿ ಹೊಸದಾಗಿ ಗೃಹ ಸಾಲ ಪಡೆಯುವವರಿಗೆ ವರ್ಷಕ್ಕೆ ಬಡ್ಡಿದರ ಶೇಕಡಾ 7.90ರಿಂದ ಆರಂಭವಾಗಲಿದೆ. ಈ ಹಿಂದೆ ಅದು ವರ್ಷಕ್ಕೆ ಶೇಕಡಾ 8.15ರಷ್ಟಿತ್ತು ಎಂದು ಎಸ್ ಬಿಐ ತಿಳಿಸಿದೆ.

SCROLL FOR NEXT