ವಾಣಿಜ್ಯ

'ಓಲಾ'ದಲ್ಲಿ ಸಚಿನ್ ಬನ್ಸಾಲ್ 650 ಕೋಟಿ ರೂ. ಹೂಡಿಕೆ

Srinivas Rao BV
ಕೊಲ್ಕತ್ತ: ಇಂಟರ್ ನೆಟ್‍ ವಲಯದ ಮುಂಚೂಣಿ ಉದ್ಯಮಿ ಹಾಗೂ ಫ್ಲಿಪ್‍ಕಾರ್ಟ್ ನ ಸಹ ಸ್ಥಾಪಕ ಸಚಿನ್ ಬನ್ಸಾಲ್ ಅವರು 650 ಕೋಟಿ ರೂ. ಹೂಡಿಕೆ ಮಾಡುತ್ತಿರುವುದಾಗಿ ವಿಶ್ವದ ಅತಿದೊಡ್ಡ ಬಾಡಿಗೆ ಕಾರು ಕಂಪೆನಿಗಳಲ್ಲಿ ಒಂದಾದ 'ಓಲಾ' ದೃಢಪಡಿಸಿದೆ.
ಈ ಹೂಡಿಕೆಯು ಓಲಾದ ಜಾಗತಿಕ ನಿಧಿ ಸಂಗ್ರಹದ ಭಾಗವಾಗಿದ್ದು, ಇದು ಹೂಡಿಕೆದಾರರಾಗಿ ಸಚಿನ್ ಅವರ ವೈಯಕ್ತಿಕ ಸಾಮರ್ಥ್ಯವನ್ನು ತೋರಿದೆ ಎಂದು ಓಲಾ ತಿಳಿಸಿದೆ. 
ಹೂಡಿಕೆಯ ಕುರಿತು ಮಾತನಾಡಿದ ಬನ್ಸಾಲ್ ಅವರು,  "ಓಲಾ, ಭಾರತದ ಅತ್ಯಂತ ಭರವಸೆಯ ಗ್ರಾಹಕರ ಉದ್ಯಮಗಳಲ್ಲಿ ಒಂದಾಗಿದೆ. ಪ್ರಯಾಣಿಕ ಸಾರಿಗೆ ವ್ಯವಸ್ಥೆಯಲ್ಲಿ ಆಳವಾದ ಪ್ರಭಾವವನ್ನು ಮತ್ತು ಶಾಶ್ವತ ಮೌಲ್ಯವನ್ನು ಸೃಷ್ಟಿಸುತ್ತಿದೆ. ಇದಲ್ಲದೆ, ಪ್ರಯಾಣಿಕ ಸಾರಿಗೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿರುವ ಓಲಾ, ತನ್ನ ವೇದಿಕೆ ಮೂಲಕ ಮೂಲಕ ಶತಕೋಟಿ ಭಾರತೀಯರ ವಿವಿಧ ಅಗತ್ಯಗಳನ್ನು ಪೂರೈಸುತ್ತಿದ್ದು, ವಿಶ್ವಾಸಾರ್ಹ ಕಂಪೆನಿಯಾಗಿ ಮನೆಮಾತಾಗಿದೆ' ಎಂದು ಹೇಳಿದ್ದಾರೆ. 
ಕೇವಲ 8 ವರ್ಷಗಳಲ್ಲಿ ಕಂಪೆನಿಯನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದ ಆಡಳಿತ ಮಂಡಳಿಯ ಶ್ರಮ ಶ್ಲಾಘನೀಯ. ಓಲಾ ಪ್ರಗತಿಯ ಪಯಣದಲ್ಲಿ ಭಾಗವಾಗಿರುವುದಕ್ಕೆ ವೈಯಕ್ತಿಕವಾಗಿ ಖುಷಿಯಾಗುತ್ತಿದೆ. ಕಂಪೆನಿಯ ಯಶಸ್ಸಿಗೆ ಸಾಧ್ಯವಾದ ಕೊಡುಗೆ ನೀಡಲು ಉತ್ಸುಕನಾಗಿದ್ದೇನೆ ಎಂದು ಬನ್ಸಾಲ್‍ ಹೇಳಿದ್ದಾರೆ. 
ಓಲಾ ಸಹ-ಸಂಸ್ಥಾಪಕ ಮತ್ತು ಸಿಇಒ ಭಾವಿಶ್ ಅಗರ್ ವಾಲ್‍ ಮಾತನಾಡಿ, ಓಲಾದಲ್ಲಿ ಸಚಿನ್‍ ಅವರು ಹೂಡಿಕೆದಾರರಾಗಿರುವುದಕ್ಕೆ ಕಂಪೆನಿ ಹೆಮ್ಮೆ ಪಡುತ್ತಿದೆ. ಸಚಿನ್ ಅವರ ಉದ್ಯಮಶೀಲತೆ ಭಾರತದ ಅತ್ಯಂತ ಗೌರವಾನ್ವಿತ ವ್ಯವಹಾರಗಳನ್ನು ನಿರ್ಮಿಸುವಲ್ಲಿ ಅವರ ಅನುಭವಕ್ಕೆ ಸರಿಸಾಟಿಯಿಲ್ಲ. ಒಂದು ಶತಕೋಟಿ ಜನರಿಗೆ ಸೇವೆ ಸಲ್ಲಿಸಲು ಅವರ ಹೂಡಿಕೆಯು ಕಂಪೆನಿಗೆ ದೊಡ್ಡ ಪ್ರೋತ್ಸಾಹವಾಗಿದೆ ಎಂದು ಹೇಳಿದ್ದಾರೆ.
SCROLL FOR NEXT