ವಾಣಿಜ್ಯ

2018ರ ನವೆಂಬರ್ ನಲ್ಲಿ ಐಐಪಿ ಶೇ.0.5 ರಷ್ಟು ಕುಸಿತ, 17 ತಿಂಗಳಲ್ಲೇ ಅತ್ಯಂತ ಕಡಿಮೆ

Lingaraj Badiger
ನವದೆಹಲಿ: 2018ರ ನವೆಂಬರ್ ನಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕ(ಐಐಪಿ) ಶೇ.0.5 ಕುಸಿದಿದ್ದು, ಇದು ಕಳೆದ 17 ತಿಂಗಳಲ್ಲೇ ಅತ್ಯಂತ ಕಡಿಮೆಯಾಗಿದೆ.
ಇಂದು ಕೇಂದ್ರ ಅಂಕಿ ಸಂಖ್ಯೆಗಳ ಕಚೇರಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಐಪಿಪಿ ಶೇ.7.9ಕ್ಕೆ ಕುಸಿದಿದೆ. ಇದಕ್ಕೆ ಮುಖ್ಯ ಕಾರಣ ಉತ್ಪಾದನಾ ವಲಯ, ವಿಶೇಷವಾಗಿ ಗ್ರಾಹಕ ವಸ್ತುಗಳ ಉತ್ಪಾದನೆಯಲ್ಲಿ ಕುಸಿತ ಮತ್ತು ಬಂಡವಾಳ ಸರಕು ಕ್ಷೇತ್ರದಲ್ಲಿನ ಕುಸಿತ ಎನ್ನಲಾಗಿದೆ.
2017ರ ನವೆಂಬರ್ ನಲ್ಲಿ ಶೇ.8.5ಕ್ಕೆ ಏರಿಕೆಯಾಗಿದ್ದ ಐಐಪಿ ಅಕ್ಟೋಬರ್ 2018ರಲ್ಲಿ ಶೇ.8.4ಕ್ಕೆ ಕುಸಿದಿತ್ತು. ಈಗ ಮತ್ತೆ ಶೇ.05ರಷ್ಟು ಕುಸಿದಿದೆ. 
ಗಣಿಗಾರಿಕೆ ವಲಯದ ಉತ್ಪಾದನೆ ಶೇ. 2.7ರಷ್ಟು ಹೆಚ್ಚಳ ಕಂಡಿದ್ದು, 2017ರ ನವೆಂಬರ್ ನಲ್ಲಿ ಈ ಪ್ರಮಾಣ ಶೇ. 1.4 ರಷ್ಟು ಆಗಿತ್ತು.
ಇನ್ನು ವಿದ್ಯುತ್ ಉತ್ಪಾದನೆ ಕ್ಷೇತ್ರ ಶೇ.5.1ರಷ್ಟು ಬೆಳವಣಿಗೆ ಸಾಧಿಸಿದೆ. ಈ ಪ್ರಗತಿ ಪ್ರಮಾಣ 2017ರ ನವೆಂಬರ್ ನಲ್ಲಿ ಶೇ. 3.7 ರಷ್ಟು ಇತ್ತು.
SCROLL FOR NEXT