ವಾಣಿಜ್ಯ

ಇನ್ಫೋಸಿಸ್ 3ನೇ ತ್ರೈಮಾಸಿಕ ನಿವ್ವಳ ಲಾಭದಲ್ಲಿ 30 ಪರ್ಸೆಂಟ್ ಇಳಿಕೆ

Nagaraja AB

ನವದೆಹಲಿ: ಡಿಸೆಂಬರ್ 2018 ರ ತ್ರೈಮಾಸಿಕದಲ್ಲಿ  ಇನ್ಫೋಸಿಸ್ ಕಂಪನಿಯ ನಿವ್ವಳ ಲಾಭವು ಶೇ .30 ರಷ್ಟು ಕುಸಿದಿದ್ದು,  3,610 ಕೋಟಿ ರೂಪಾಯಿಗೆ ಇಳಿದಿದೆ. ಆದಾಗ್ಯೂ, 8,260 ಕೋಟಿ ರೂಪಾಯಿ ಷೇರು ಖರೀದಿ ಯೋಜನೆಯನ್ನು ಘೋಷಿಸಿದೆ.

ದೇಶದ ಎರಡನೇ ಅತಿದೊಡ್ಡ ಸಾಪ್ಟ್ ವೇರ್ ಸೇವಾ ಸಂಸ್ಥೆಯಾಗಿರುವ  ಇನ್ಫೋಸಿಸ್ 2017ರ ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ  5.129 ಕೋಟಿ ನಿವ್ಳಳ ಲಾಭ ಗಳಿಸಿತ್ತು.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಡಿಸೆಂಬರ್ 2018 ತ್ರೈಮಾಸಿಕ ಅವಧಿಯಲ್ಲಿ ಬೆಂಗಳೂರು ಮೂಲದ ಸಂಸ್ಥೆಯ ಆದಾಯ ಶೇ, 20.3 ರಿಂದ 21, 400 ಕೋಟಿಯವರೆಗೂ ಅಭಿವೃದ್ಧಿಯಾಗಿದೆ.

 ಪ್ರತಿ ಷೇರಿಗೆ 800 ರೂಗೆ  ಮೀರದ ಬೆಲೆಗೆ  8,260 ಕೋಟಿ ರೂ. (1.18 ಶತಕೋಟಿ ಯುಎಸ್ ಡಾಲರ್) ವರೆಗೆ ಮುಕ್ತ ಮಾರುಕಟ್ಟೆ ಮಾರ್ಗದಿಂದ ಇಕ್ವಿಟಿ ಷೇರುಗಳ ಮರುಖರೀದಿಗೆ ಆಡಳಿತ ಮಂಡಳಿ  ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ. ಅಲ್ಲದೇ, ಇನ್ಪೋಸಿಸ್  ಪ್ರತಿಷೇರಿಗೆ 4 ರೂ. ವಿಶೇಷ ಡಿವಿಡೆಂಡ್  ಘೋಷಿಸಿರುವುದರಿಂದ 2.107 ಕೋಟಿ ಹಣವನ್ನು ಪಾವತಿಸಿದೆ.

 ಶೇ, 8.5 ರಿಂದ-9 ರಂತೆ ನಿರಂತರ ಕರೆನ್ಸಿಯಲ್ಲಿ 2018-19ರ ವರ್ಷದಲ್ಲಿ ಆದಾಯವನ್ನು ಕಂಪನಿಯನ್ನು ಪರಿಷ್ಕರಿಸಲಾಗಿದೆ. ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ,10.1 ರಷ್ಟು ಪ್ರತಿವರ್ಷ ಬೆಳವಣಿಗೆಯಾಗುತ್ತಿದೆ ಎಂದು ಇನ್ಫೋಸಿಸ್  ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ  ಸಾಲಿಲ್  ಪರೇಖ್ ಹೇಳಿದ್ದಾರೆ.
2019ರ ವರ್ಷದಲ್ಲಿ ಶೇ.33.1 ರಂತೆ ವ್ಯವಹಾರದಲ್ಲಿ ಬೆಳವಣಿಗೆಯಾಗಲಿದೆ ಎಂದು ಪರೇಖ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
SCROLL FOR NEXT