ಓಲಾದಲ್ಲಿ 150 ಕೋಟಿ ರೂ ಹೂಡಿಕೆ ಮಾಡಿದ ಸಚಿನ್ ಬನ್ಸಾಲ್
ಆನ್ ಲೈನ್ ಮಾರಾಟ ಸಂಸ್ಥೆ ಫ್ಲಿಪ್ ಕಾರ್ಟ್ ನ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್ ಆಪ್ ಆಧಾರಿತ ಟ್ಯಾಕ್ಸಿ ಸೇವೆಯಾದ ಓಲಾ ಸಂಸ್ಥೆಯಲ್ಲಿ 150 ಕೋಟಿ ರೂ.ಹುಡಿಕೆ ಮಾಡಿದ್ದಾರೆ.
ನವದೆಹಲಿ: ಆನ್ ಲೈನ್ ಮಾರಾಟ ಸಂಸ್ಥೆ ಫ್ಲಿಪ್ ಕಾರ್ಟ್ ನ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್ ಆಪ್ ಆಧಾರಿತ ಟ್ಯಾಕ್ಸಿ ಸೇವೆಯಾದ ಓಲಾ ಸಂಸ್ಥೆಯಲ್ಲಿ 150 ಕೋಟಿ ರೂ.ಹೂಡಿಕೆ ಮಾಡಿದ್ದಾರೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
70,588 ಸಂಪೂರ್ಣ ಮತ್ತು ಕಡ್ಡಾಯವಾಗಿ ಬದಲಿಸಬಲ್ಲ ರೂ. 10 ರ ಮುಖಬೆಲೆಯು ಶೇರುಗಳನ್ನು ಅವರು ಖರೀದಿಸಿದ್ದಾರೆ ಎಂದು ದಾಖಲೆಗಳಲ್ಲಿ ಬಹಿರಂಗವಾಗಿದೆ.
ಅಮೆರಿಕಾ ಚಿಲ್ಲರೆ ಮಾರುಕಟ್ಟೆ ದೈತ್ಯ ವಾಲ್ ಮಾರ್ಟ್ ಇ-ಕಾಮರ್ಸ್ ಕಂಪೆನಿಯ 77 ಪ್ರತಿಶತದಷ್ಟು ಶೇರುಗಳನ್ನು ಖರೀದಿಸಿದ ಬಳಿಕ ಫ್ಲಿಪ್ ಕಾರ್ಟ್ ಸಮೂಹದಿಂದ ಬನ್ಸಾಲ್ ಹೊರಬಂದಿದ್ದರು.
ಈ ಕುರಿತಂತೆ ಓಲಾ ಅಥವಾ ಬನ್ಸಾಲ್ ಗೆ ಕಳಿಸಲಾದ ಈ ಮೇಲ್ ಗೆ ಯಾವ ಪ್ರತಿಕ್ರಿಯೆ ಬಂದಿಲ್ಲ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.