ವಾಣಿಜ್ಯ

ಬಜೆಟ್: ವರ್ಷಕ್ಕೆ 10 ಲಕ್ಷ ರೂ. ನಗದು ವಿತ್‏ಡ್ರಾ ಮೇಲೆ ಶೇ.3-5 ತೆರಿಗೆ ಹಾಕಲು ಚಿಂತನೆ!

Nagaraja AB
ನವದೆಹಲಿ: `ನಗದು ವಹಿವಾಟು ಕಡಿಮೆ ಮಾಡಿ ಡಿಜಿಟಲ್ ವಹಿವಾಟು ಉತ್ತೇಜಿಸುವ ನಿಟ್ಟಿನಲ್ಲಿ ಒಂದು ವರ್ಷದಲ್ಲಿ 10 ಲಕ್ಷ ರೂಪಾಯಿಗಿಂತ  ಹೆಚ್ಚು ನಗದು ವಿತ್ ಡ್ರಾ ಮಾಡಿದರೆ   ತೆರಿಗೆ ವಿಧಿಸುವ ಪ್ರಸ್ತಾವನೆ ಬಗ್ಗೆ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ.
ಕಪ್ಪು ಹಣ ವಹಿವಾಟು ಹಾಗೂ ನಗದು ವಹಿವಾಟು ಕಡಿಮೆಮಾಡುವ ನಿಟ್ಟಿನಲ್ಲಿ ಒಂದು ವರ್ಷದಲ್ಲಿ 10 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ವಿತ್ ಡ್ರಾ ಮಾಡಿದರೆ ಶೇ. ಶೇಕಡಾ 3ರಿಂದ 5 ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.  
ವರ್ಷಕ್ಕೆ 10 ಲಕ್ಷ ವಿತ್  ಡ್ರಾ ಮಾಡುವುದಕ್ಕೆ 30 ರಿಂದ 50 ಸಾವಿರ ತೆರಿಗೆ ಪಾವತಿ ನಷ್ಟವೇನಿಸಬಹುದು ಆದರೆ, ನಗದು ವಹಿವಾಟು ಕಡಿಮೆ ಮಾಡಬಹುದು ಎಂಬುದು ಸರ್ಕಾರದ ಆಲೋಚನೆಯಾಗಿದೆ. 
ಇದರ ಬಗ್ಗೆ ಆಂತರಿಕ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ. ತೆರಿಗೆ ಪ್ರಮಾಣ ಶೇ, 5 ಕ್ಕಿಂತ ಕಡಿಮೆ ಇರಬಾರದು ಎಂಬ ಬಗ್ಗೆಯೂ ಚರ್ಚೆ ಸಾಗುತ್ತಿದೆ. ಶೇ, 3ರಿಂದ 5 ರಷ್ಟು ಸೂಕ್ತವಾದದ್ದು ಎಂದು ಸಲಹೆ ನೀಡಲಾಗಿದೆ ಎಂದು ಅಧಿಕಾರಿಗಳ ಮೂಲಗಳಿಂದ ತಿಳಿದುಬಂದಿದೆ.
ಈ ನಿಟ್ಟಿನಲ್ಲಿ ಆರ್ ಬಿಐ  ಎನ್ ಇಎಫ್ ಟಿ , ಆರ್ ಟಿಜಿಎಸ್ ಪಾವತಿ ಸರ್ವರ್ಸ್  ಬಳಕೆಗಾಗಿ ಬ್ಯಾಂಕುಗಳ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ಮನ್ನಾ ಮಾಡಿದೆ. ಎಟಿಎಂ ವಿತ್ ಡ್ರಾ ಮೇಲೆ ಬ್ಯಾಂಕುಗಳ ವಿಧಿಸುವ ಶುಲ್ಕಗಳ ಬಗ್ಗೆ ಪರಾಮರ್ಶೆಗಾಗಿ ಸಮಿತಿಯನ್ನು ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಇದರಿಂದಾಗಿ ಡಿಜಿಟಲ್  ವ್ಯವಹಾರಕ್ಕೆ ಅನುಕೂಲವಾಗಲಿದೆ ಎಂದು ಆರ್ ಬಿಐ ಹೇಳಿದೆ. 
ವಿದೇಶದಲ್ಲಿಯೂ ಇಂತಹ ಪದ್ಧತಿ ಚಾಲ್ತಿಯಲ್ಲಿದೆ. ಪಾಕಿಸ್ತಾನದಲ್ಲಿ 50 ಸಾವಿರಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡಿದರೆ ತೆರಿಗೆ ವಿಧಿಸಲಾಗುತ್ತದೆ. ನಗದು ವಹಿವಾಟು ಕಡಿಮೆ ಮಾಡಲು ತೆರಿಗೆ ವಿಧಿಸಬೇಕೆಂದು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ  2017ರಲ್ಲಿ ನೇಮಿಸಲಾಗಿದ್ದ ಡಿಜಿಟಲ್ ಪಾವತಿ ಮೇಲಿನ ಉನ್ನತ ಮಟ್ಟದ ಸಮಿತಿ ಕೂಡಾ ಸಲಹೆ ನೀಡಿತ್ತು. 
ದೊಡ್ಡ ಮೊತ್ತದ ನಗದು ವಹಿವಾಟು ಹಾಗೂ ಕಪ್ಪ ಹಣ ತಡೆಗಾಗಿ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ 2017-18ರ ಬಜೆಟ್ ನಲ್ಲಿ ದಿನವೊಂದರಲ್ಲಿ  3 ಲಕ್ಷ ರೂಪಾಯಿ ವಹಿವಾಟು ಬ್ಯಾನ್ ಮಾಡಲು ಪ್ರಸ್ತಾವಿಸಿದ್ದರು. 2017ರ ಹಣಕಾಸು ಕಾಯ್ದೆ ತಿದ್ದುಪಡಿ ಮೂಲಕ ಇದರ ಮಿತಿಯನ್ನು 2 ಲಕ್ಷಕ್ಕೆ ನಿಗದಿಗೊಳಿಸಲಾಯಿತು. 
SCROLL FOR NEXT