ವಾಣಿಜ್ಯ

ಏಳು ತಿಂಗಳ ಗರಿಷ್ಟ ಮಟ್ಟ ತಲುಪಿದ ಚಿಲ್ಲರೆ ಹಣದುಬ್ಬರ, ಶೇ. 3.05 ದಾಖಲು

Raghavendra Adiga
ನವದೆಹಲಿ: ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಮೇ ತಿಂಗಳಲ್ಲಿ ಚಿಲ್ಲರೆ ಹಣ್ದುಬ್ಬರ ಪ್ರಮಾಣ ಶೇ. 3.05ಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರದ ವರದಿ ಹೇಳಿದೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯೇ ಈ ಹೆಚ್ಚಳಕ್ಕೆ ಕಾರಣವೆಂದು ಸರ್ಕಾರ ಬುಧವಾರ ಪ್ರಕಟಿಸಿದ ವರದಿ ಹೇಳಿದೆ.
ಏಪ್ರಿಲ್ ನಲ್ಲಿ ಗ್ರಾಹಕರ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ಅಂದಾಜನ್ನು ಈ ಮುಂಚಿನ ಶೇ. 2.92 ಶೇಕಡಾದಿಂದ ಶೇ. 2.99ಕ್ಕೆ ಪರಿಷ್ಕರಿಸಲಾಗಿತ್ತು.
ಕಳೆದ ವರ್ಷ ಮೇ ನಲ್ಲಿ ಚಿಲ್ಲರೆ ಹಣದುಬ್ಬರ ಶೇ 4.87 ರಷ್ಟಿತ್ತು.ಅಲ್ಲದೆ ಈ ಮುನ್ನ ಚಿಲ್ಲರೆ ಹಣದುಬ್ಬರ ಅತ್ಯಂತ ಗರಿಷ್ತ ಪ್ರಮಾಣದ ಏರಿಕೆ ದಾಖಲಿಸಿದ್ದು 2018ರ ಅಕ್ಟೋಬರ್ ನಲ್ಲಾಗಿದ್ದು ಆ ಮಾಸದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ. 3.38 ಆಗಿತ್ತು.
ಅಂಕಿ ಅಂಶಗಳ ಪ್ರಕಾರ ಮೇ ತಿಂಗಳಲ್ಲಿ ಆಹಾರ ಸಾಮಗ್ರಿಗಳ ಬೆಲೆಗಳಲ್ಲಿ ಶೇ. 1.83 ರಷ್ಟು ಏರಿಕೆಯಾಗಿದೆ. ಇದು ಕಳೆದ ಏಪ್ರಿಲ್ ನಲ್ಲಿ ಆಗಿದ್ದ ಶೇ. 1.1 ಏರಿಕೆಗಿಂತ ಹೆಚ್ಚಿದೆ.
ಚಿಲ್ಲರೆ ಹಣದುಬ್ಬರವು ರಿಸರ್ವ್ ಬ್ಯಾಂಕ್ ಹಣಕಾಸು ನೀತಿಗೆ ಅತ್ಯಂತ ಶೀಘ್ರವಾಗಿ ಪ್ರತಿಕ್ರಿಯೆ ತೋರುತ್ತದೆ.
SCROLL FOR NEXT