ವಾಣಿಜ್ಯ

ಜೈಲು ಶಿಕ್ಷೆಯಿಂದ ಅನಿಲ್‌ ಅಂಬಾನಿ ಪಾರು, ಎರಿಕ್ಸನ್ ಗೆ 458 ಕೋಟಿ ರೂ. ಪಾವತಿಸಿದ ರಿಲಯನ್ಸ್ ಕಮ್ಯುನಿಕೇಷನ್ಸ್‌

Lingaraj Badiger
ನವದೆಹಲಿ: ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಅಧ್ಯಕ್ಷ ಅನಿಲ್‌ ಅಂಬಾನಿ ಅವರು ಸುಪ್ರೀಂ ಕೋರ್ಟ್ ಗಡುವು ಮುಗಿಯುವ ಒಂದು ದಿನ ಮುಂಚಿತವಾಗಿಯೇ ಎರಿಕ್ಸನ್‌ ಇಂಡಿಯಾ ಕಂಪನಿಗೆ 458.77 ಕೋಟಿ ರೂ.ಗಳನ್ನು ಪಾವತಿಸುವ ಮೂಲಕ ಜೈಲು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.
ಸ್ವೀಡನ್ ಮೂಲದ ದೂರ ಸಂಪರ್ಕ ಉಪಕರಣ ತಯಾರಿಕಾ ಸಂಸ್ಥೆ ಎರಿಕ್ಸನ್ ಗೆ ಮುಂದಿನ 4 ವಾರಗಳೊಳಗೆ ಬಾಕಿ ಪಾವತಿಸಬೇಕು. ಇಲ್ಲದಿದ್ದರೆ ಮೂರು ತಿಂಗಳು ಜೈಲು ಶಿಕ್ಷೆ ಎದುರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ಅನಿಲ್ ಅಂಬಾನಿಗೆ ಎಚ್ಚರಿಕೆ ನೀಡಿತ್ತು.
ಮೂಲಗಳ ಪ್ರಕಾರ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಿಲಯನ್ಸ್‌ ಕಮ್ಯುನಿಕೇಷನ್ಸ್‌, ಎರಿಕ್ಸನ್‌ ಗೆ 458.77 ಕೋಟಿ ರೂಪಾಯಿ ಪಾವತಿಸಿದೆ. ಆದರೆ ಅದರ ವಿವರ ಇನ್ನು ಲಭ್ಯವಾಗಿಲ್ಲ.
ಸುಪ್ರೀಂ ಕೋರ್ಟ್ ಬಾಕಿ ಉಳಿಸಿಕೊಂಡಿದ್ದ ಅನಿಲ್‌ ಅಂಬಾನಿ ಹಾಗೂ ಇತರ ಇಬ್ಬರು ನಿರ್ದೇಶಕರು ತಲಾ 1 ಕೋಟಿ ರೂಪಾಯಿ ದಂಡ ವಿಧಿಸಿದ್ದು, ಇದನ್ನು 1 ತಿಂಗಳೊಳಗೆ ಪಾವತಿಸದಿದ್ದರೆ ಮತ್ತೊಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸಹ ಎಚ್ಚರಿಸಿತ್ತು.
ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಗ್ರೂಪ್‌ಗೆ (ಎಡಿಎಜಿ) ರಫೆಲ್‌ ಜೆಟ್‌ ಡೀಲ್‌ನಲ್ಲಿ ಹೂಡಿಕೆ ಮಾಡಲು ದುಡ್ಡಿದೆ. ಆದರೆ ತನಗೆ ಕೊಡಬೇಕಿರುವ 550 ಕೋಟಿ ರೂ. ಬಾಕಿ ನೀಡಲು ಸತಾಯಿಸುತ್ತಿದೆ ಎಂದು ಎರ್ರಿಕ್ಸನ್‌ ದೂರಿತ್ತು.
SCROLL FOR NEXT